Chhattisgarh : ಹೆಂಡತಿಯನ್ನ ಕೊಂದು, ಕತ್ತರಿಸಿ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟ ಪತಿ….
32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಕೊಂದು ಆಕೆಯ ದೇಹವನ್ನ ಐದು ತುಂಡುಗಳಾಗಿ ಕತ್ತರಿಸಿ ಖಾಲಿ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಸಕ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಸ್ಲಾಪುರ ಪ್ರದೇಶದಲ್ಲಿ ಬಾಡಿಗೆ ಮನೆಯ ರೂಮ್ ನಲ್ಲಿ ಆರೋಪಿ ಇರಿಸಿದ್ದ ದೇಹದ ಭಾಗಗಳನ್ನ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಲಾಸ್‌ಪುರ ಪೊಲೀಸ್ ನ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕದ ತಂಡ ಆ ಜಾಗದಲ್ಲಿ ನಕಲಿ ಕರೆನ್ಸಿ ಮುದ್ರಿಸುತ್ತಿರುವ ಬಗ್ಗೆ ಸುಳಿವು ಆಧರಿಸಿ ಮನೆಯ ಮೇಲೆ ದಾಳಿ ನಡೆಸಿದಾಗ ಈ ಸಾವು ಬೆಳಕಿಗೆ ಬಂದಿದೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ. ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ₹ 500 ಮತ್ತು 200 ಮುಖಬೆಲೆಯ ಕಲರ್ ಪ್ರಿಂಟರ್, ಫೋಟೊಕಾಪಿ ಪೇಪರ್‌ಗಳು ಮತ್ತು ನಕಲಿ ನೋಟುಗಳನ್ನ ವಶಪಡಿಸಿಕೊಂಡಿದ್ದಾರೆ. ಸ್ನಾನಗೃಹದ ಸಮೀಪದಿಂದ ದುರ್ವಾಸನೆ ಬರುತ್ತಿರುವುದನ್ನ ಗಮನಿಸಿ ಪೊಲೀಸರು ಪರಿಶೀಲಿಸಿ ದೇಹದ ತುಂಡುಗಳನ್ನ ವಶಪಡಿಸಿಕೊಂಡಿದ್ದಾರೆ.
ಕೊಲೆ ಆರೋಪಿ ತನ್ನ ಪತ್ನಿ ಸತಿ ಸಾಹು (23) ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ ಜನವರಿ 6 ರಂದು ಕೊಲೆ ಮಾಡಿದ್ದಾನೆ. ಪೊಲೀಸರು ಕೊಲೆ ಮತ್ತು ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದ ಮೇಲೆ ವ್ಯಕ್ತಿಯನ್ನ ಬಂಧಿಸಿದ್ದಾರೆ.
Chhattisgarh: The husband killed his wife, cut her up and hid her in a water tank.