ಮನೆಯಲ್ಲೇ ಚಿಕನ್ ಗ್ರೇವಿ ತುಂಬಾ ಸಿಂಪಲ್ ವಿಧಾನದಲ್ಲಿ ಮಾಡಿ ನೋಡಿ..!!!

1 min read

ಮನೆಯಲ್ಲೇ ಚಿಕನ್ ಗ್ರೇವಿ ತುಂಬಾ ಸಿಂಪಲ್ ವಿಧಾನದಲ್ಲಿ ಮಾಡಿ ನೋಡಿ..!!!

ಬೇಕಾಗುವ ಪದಾರ್ಥಗಳು

ಚಿಕನ್ : 1 ಅಥವ 1 ವರೆ ಕೆಜಿ

ಪುದೀನಾ

ಕೊತ್ತಂಬರಿ

ಅರಿಶಿಣ

ಉಪ್ಪು

ಈರುಳ್ಳಿ

ಟೊಮ್ಯಾಟೋ

ಶುಂಠಿ

ಬೆಳ್ಳುಳ್ಳಿ

ತೆಂಗಿನಕಾಯಿ ( ಆಪ್ಷನಲ್ )

ಅಕ್ಕೆ , ಲವಂಗ

ಚಿಕನ್ ಮಸಾಲೆ ಪೌಡರ್

ಖಾರದ ಪುಡಿ , ಧನ್ಯಪುಡಿ

ಎಣ್ಣೆ

 

ಮಾಡುವ ವಿಧಾನ :  ಚಿಕನ್ ಅನ್ನು ಒಂದು ಪಾತ್ರಯಲ್ಲಿ ಹಾಕಿ ಚನ್ನಾಗಿ ಉಪ್ಪು ಹರಿಶಿಣವನ್ನ ಹಚ್ಚಿ ತೊಳೆದುಕೊಳ್ಳಿ ( ಹೀಗೆ ಮಾಡಿದ್ರೆ , ಚಿಕನ್ ನ ಹೊಲಸು ವಾಸನೆ ಹೋಗುತ್ತದೆ.. ) ನಂತರ ಒಂದು ಈರುಳ್ಳಿಯನ್ನು ದೊಡ್ಡ ದೊಡ್ಡ ಗಾತ್ರದಲ್ಲಿ ಹೆಚ್ಚಿಟ್ಟುಕೊಳ್ಳಿ ಒಂದು ಪ್ಯಾನ್ ಅಥವ ಪಾತ್ರೆಗೆ ಒಂದು 4 -5 ಟೇಬಲ್ ಸ್ಪೂನ್ ಎಣ್ಣೆ ಹಾಕಿ.

ಅದಕ್ಕೆ ಲವಂಗ ಒಂದೆರೆಡು ಮೂರು , ಚೆಕ್ಕೆ ಒಂದು ಸ್ಟಿಕ್ ಹಾಕಿ ನಂತರ ಅದಕ್ಕೆ  ಈರುಳ್ಳಿ ಹಾಕಿ ಚನ್ನಾಗಿ ಬಾಡಿಸಿ ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಅದಕ್ಕೆ ತೊಳೆದು ಸಂಪೂರ್ಣವಾಗಿ ನೀರು ಸೋಸಿದ ಚಿಕನ್ ಸೇರಿಸಿ ಬಾಡಿಸಿ.. ಚಿಕನ್ ಗೆ ಉಪ್ಪು ಅರಿಶಿಣ ಪುಡಿ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ನೀರು ಹಾಕದೇ ಮಧ್ಯಮ ಫ್ಲೇಮ್ ನಲ್ಲಿ ಇಟ್ಟು ಪ್ಯಾನ್ ಮೇಲೆ ಮುಚ್ಚಳ ಮುಚ್ಚಿಡಿ…. ಆಗಾಗ ನೋಡುತ್ತಿರಬೇಕು ತಳಹಿಡಿದರೆ , ಒಂದು ಚಿಕ್ಕ ಲೋಟದಲ್ಲಿ ನೀರು ಹಾಕಿ..

ಮತ್ತೊಂದ್ ಕಡೆ ಜಾರಿನಲ್ಲಿ ಶುಂಠಿ ,  ಬೆಳ್ಳುಳ್ಳಿ , ಹಸಿ ಮೆಣಸಿನ ಕಾಯಿ , ಕೊತ್ತಂಬರಿ ಸೊಪ್ಪು , ಪುದೀನಾ ಸೊಪ್ಪು, ಬೇಕಿದ್ರೆ ತೆಂಗಿನ ಕಾಯಿ ( ಆಪ್ಷನಲ್) , ಉಳಿ ಖಾರ ನಿಮ್ಮ ರುಚಿಗೆ ತಕ್ಕಷ್ಟು ಪ್ರಮಾಣದಲ್ಲಿ ಪದಾರ್ಥಗಳನ್ನ   ತೆಗೆದುಕೊಳ್ಳಿ.. ಇಷ್ಟನ್ನೂ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಟ್ಟುಕೊಳ್ಳಿ..

ಇತ್ತ ಬೇಯಲು ಇಟ್ಟಿದ್ದ ಚಿಕನ್ ನ ಬಣ್ಣ ಸ್ವಲ್ಪ ಬದಲಾಗಿರುತ್ತದೆ.. ಆಗ ಅದಕ್ಕೆ  ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಚನ್ನಾಗಿ ಬಾಡಿಸಿ ಮತ್ತೆ ಮುಚ್ಚಳ ಮುಚ್ಚಿ ಒಂದೆರೆಡು ನಿಮಿಷ ಕಾಯಲು ಬಿಡಿ. ಇತ್ತ  ನಿಮಗೆ ಇಷ್ಟವಿದ್ದಲ್ಲಿ ಟಮ್ಯಾಟೋವನ್ನ ಹೆಚ್ಚಿಯೂ ಹಾಕಬಹುದು,, ಇಲ್ಲದೇ ಇದ್ದರೆ , ಒಂದು 4 -5 ದೊಡ್ಡ ಗಾತ್ರದ ಟೊಮ್ಯಾಟೋಗಳನ್ನ ರಫ್ ಆಗಿ ಹೆಚ್ಚಿ ರುಬ್ಬಿ ನಂತರ ಆ ಮಿಶ್ರಣವನ್ನ ಚಿಕನ್ ಜೊತೆಗೆ ಸೇರಿಸಿ ಪಬಾಡಿಸಿಕೊಳ್ಳಿ ,,, ಇದಕ್ಕೆ ರುಚಿಗೆ ತಕ್ಕಷ್ಟು ಖಾರದ ಪುಡಿ , ಧನ್ಯಾ ಪುಡಿ ಸೇರಿಸಿ.. ಆ ನಂತರ ಚಿಕನ್ ಮಸಾಲೆ ಪುಡಿ ನಿಮ್ಮ ಆಯ್ಕೆಯದ್ದು  ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ಚಿಕ್ಕ ಲೋಟದ ತುಂಬಾ ನೀರು ಹಾಕಿ ಎಲ್ಲಾ ಪದಾರ್ಥಗಳನ್ನ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಹಾಗೆಯೇ ಬೇಯಲು ಬಿಡಿ.. ಇದಾದ ನಂತರ ನಿಮಗೆ ಯಾವ ಹದದಲ್ಲಿ ಬೇಕೋ ನೋಡಿಕೊಂಡು ನೀರು ಹಾಕಿಕೊಳ್ಳಿ , ಗಟ್ಟಿ ಅಥವ ತೆಳು..ನೀರು ಹಾಕಿ ನಂತರ ಕೊತ್ತಂಬರಿ ಸೊಪ್ಪನ್ನ ಹೆಚ್ಚಿ ಹಾಕಿ ಕಲಸದೇ ಪ್ಲೇಟ್ ಮುಚ್ಚಿ ಒಂದು 1 0 -15 ನಿಮಿಷಗಳ ಕಾಲ ಚನ್ನಾಗಿ ಬೇಯಲು ಬಿಡಿ.. ನೀರು ಕಡಿಮೆ ಅನಿಸಿದ್ರೆ  ನೀರು ಹಾಕಿ ಮತ್ತೆ ಒಂದು ಸ್ವಲ್ಪ ಹೊತ್ತು ಬೇಯಲು ಬಿಡಿ ಕಡೆಯದಾಗಿ ನೀರು ಸ್ವಲ್ಪ ಇಂಗಿ  ಎಣ್ಣೆ ಬಿಟ್ಟುಕೊಂಡಿರುತ್ತೆ,,, ಎಣ್ಣೆ ಮೇಲೆ ಬಂದಿದ್ರೆ ಬೆಂದಿದೆ ಎಂದರ್ಥ.. ಗ್ಯಾಸ್ ಆಫ್ ಮಾಡಿ , ಚಪಾತಿ , ದೋಸ್ , ಇಡ್ಲಿ , ರೈಸ್ , ಹದ ಮುದ್ದೆಗೆ ಸರಿ ಹೊಂದಿದ್ರೆ ಮುದ್ದೆ ಜೊತೆಗೂ ಸವಿಯಲು ಬೊಂಬಾಟ್ ಆಗಿರುತ್ತೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd