ಬೀಜಿಂಗ್: ಇಸ್ರೇಲ್ (Israel) ಹಾಗೂ ಹಮಾಸ್ (Hamas) ಮಧ್ಯೆ ಯುದ್ಧ ನಡೆಯುತ್ತಿದ್ದು, ಈಗ ತನ್ನ ನಿಲುವಿನ ಕುರಿತು ಭಾರೀ ಟೀಕೆಗೆ ಒಳಗಾಗಿದ್ದ ಚೀನಾ, ಈಗ ತನ್ನ ನಿಲುವು ಬದಲಾಯಿಸಿದೆ.
ಹಮಾಸ್ ದಾಳಿಯ ವಿರುದ್ಧ ಇಸ್ರೇಲ್ ಗೆ ಆತ್ಮ ರಕ್ಷಣೆಯ ಹಕ್ಕಿದೆ ಎನ್ನುವ ಮೂಲಕ ಉಲ್ಟಾ ಹೊಡೆದಿದೆ. ಪ್ರತಿಯೊಂದು ದೇಶ ಆತ್ಮರಕ್ಷಣೆಯ ಹಕ್ಕು ಹೊಂದಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಅದು ಬದ್ಧವಾಗಿರಬೇಕು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿಕೊಂಡಿರುವ ಹಮಾಸ್ ದಾಳಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕು ಇಸ್ರೇಲ್ ಗೆ ಇದೆ ಎಂದು ಚೀನಾ ಹೇಳಿದೆ.