ಭಾರತದೊಂದಿಗಿನ ತಮ್ಮ ಸಂಬಂಧದಲ್ಲಿ ಮೂಗು ತೂರಿಸಬೇಡಿ – ಅಮೆರಿಕಕ್ಕೆ ಚೀನಾ ಎಚ್ಚರಿಕೆ..
ಭಾರತದೊಂದಿಗಿನ ತಮ್ಮ ಸಂಬಂಧದ ವಿಷಯವಾಗಿ ಮೂಗು ತೂರಿಸಬೇಡಿ ಎಂದು ಚೀನಾ, ಅಮೆರಿಕಕ್ಕೆ ಎಚ್ಚರಿಸಿದೆ ಎಂದು ಪೆಂಟಗನ್ ಅಮೆರಿಕ ಕಾಂಗ್ರೆಸ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಅಮೆರಿಕ ಜೊತೆ ಭಾರತ ಹೆಚ್ಚು ಆಪ್ತವಾಗುವುದನ್ನು ತಪ್ಪಿಸಲು ಗಡಿ ಬಿಕ್ಕಟ್ಟಿನಲ್ಲಿ ಅಮೆರಿಕ ಮೂಗು ತೂರಿಸದಂತೆ ನೋಡಿಕೊಳ್ಳುವತ್ತ ಚೀನಾ ಗಮನ ಹರಿಸುತ್ತಿದೆ ಮತ್ತು ಭಾರತದ ಜೊತೆಗಿನ ತಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ಚೀನಾ, ಅಮೆರಿಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಿದೆ.
ಮೇ 2020ರಿಂದ ಎಲ್ಎಸಿ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಕಲ್ಲುಗಳು, ಲಾಠಿಗಳನ್ನು ಹಿಡಿದು ಚೀನಾ ಮತ್ತು ಭಾರತೀಯ ಪಡೆಗಳು ಘರ್ಷಣೆಯಲ್ಲಿ ಭಾಗಿಯಾದವು. ಇದರ ಪರಿಣಾಮ, ಗಡಿಯ ಎರಡೂ ಬದಿಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಲಾಗಿದೆ.
China warns America: Don’t stick your nose in your relationship with India – China warns America..