ಚಿರಾಗ್ ಆಸ್ಪತ್ರೆ ರಜತ ಮಹೋತ್ಸವ Chirag Hospital saaksha tv
ಬೆಂಗಳೂರು : ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಚಿರಾಗ್ ಆಸ್ಪತ್ರೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಪೈಲ್ಸ್ ದಿನದಂದು ಹಮ್ಮಿಕೊಂಡಿತು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಅಧ್ಯಕರಾದ ಡಾ.ರಾಜಶೇಖರ್ ರಾಮಕೃಷ್ಣ ಮೈಸೂರು, ಕನ್ಸಲ್ಟೆಂಟ್ ಸರ್ಜನ್ ಮತು ಕೊಲೋ-ಪ್ರೊಕ್ಟಾಲಜಿಸ್ಟ್ ಇವರು ಬರೆದಿರುವ ’ಹೆಲ್ತ್ ಆರ್ ಹೆಲ್’ ಮೂರನೇ ಅವೃತ್ತಿಯ ಜೊತೆ ಕನ್ನಡ ಅವತರಣಿಕೆ ‘ಸಿದ್ದಿ ಬುದ್ದಿ ಸುದ್ದಿಗಳು’ ಪುಸ್ತಕವನ್ನು ಗಣ್ಯರುಗಳು ಲೋಕಾರ್ಪಣೆ ಮಾಡಿದರು.
ಪದ್ಮಶ್ರೀ ಡಾ.ಬಿ.ಎನ್.ಗಂಗಾಧರ್, ಹಿರಿಯ ಪೊಲೀಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್, ಗಾನ ಕಲಾ ಭೂಷಣ ಡಾ.ಆರ್.ಕೆ.ಪದ್ಮನಾಭ, ಉಪಾಧ್ಯಕ್ಷ ಇನ್ಫೋಸಿಸ್ ಶೇಷಾದ್ರಿ ಹಾಗೂ ನಗರದ ಹೆಸರಾಂತ ವೈದ್ಯರು ಉಪಸ್ತಿತರಿದ್ದರು.