ಮಹಾರಾಷ್ಟ್ರದಲ್ಲಿ ಥಿಯೇಟರ್ ಗಳು ಬಂದ್..! ಕರ್ನಾಟಕದ ಕಥೆ ಏನು..?
1 min read
ಮಹಾರಾಷ್ಟ್ರದಲ್ಲಿ ಥಿಯೇಟರ್ ಗಳು ಬಂದ್..! ಕರ್ನಾಟಕದ ಕಥೆ ಏನು..?
ಇಡೀ ದೇಶದಲ್ಲಿ ಕೊರೊನಾ 2 ನೇ ಅಲೆ ಜೋರಾಗಿಯೇ ಅಪ್ಪಳಿಸಿದ್ದು, ದೇಶದ ಟಾಪ್ 5 ದೇಶಗಳಲ್ಲಿಯೇ ಹೆಚ್ಚು ಸೋಂಕಿತರು ಪತ್ತೆಯಾಗ್ತಿದ್ದು, ಅದ್ರಲ್ಲಿ ಅಗ್ರ ಸ್ಥಾನದಲ್ಲಿ ಮಹರಾಷ್ಟ್ರವಿದೆ. ಟಾಪ್ 10 ಅಲ್ಲಿ ಕರ್ನಾಟಕ ಅದ್ರಲ್ಲೂ ನಗರಗಳ ಸ್ಟಾಟಿಸ್ಟಿಕ್ಸ್ ನೋಡಿದ್ರೆ ಬೆಂಗಳೂರೂ ಕೂಡ ಆತಂಕದ ಗಡಿಯಲ್ಲಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆಗೆ ಜನ ತತ್ತರಿಸಿಹೋಗಿದ್ಧಾರೆ. ಅಲ್ಲಿನ ಸರ್ಕಾರ ಕೊರೊನಾ ತಡೆಗೆ ಸಾಕಷ್ಟು ಕ್ರಮಗಳನ್ನ ತೆಗೆದುಕೊಳ್ತಾಯಿದ್ದು, ಚಿತ್ರಮಂದಿರಗಳನ್ನ ಸಂಪೂರ್ಣವಾಗಿ ಬಂದ್ ಮಾಡಿದೆ. ಅಷ್ಟೇ ಅಲ್ಲ ಸಿನಿಮಾ ಶೂಟಿಂಗ್ ನಿಯಮವನ್ನೂ ಟೈಟ್ ಮಾಡಿ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ. ನೂತನ ಮಾರ್ಗಸೂಚಿ ಅನ್ವಯ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂದಿನ ಆದೇಶದವರೆಗೂ ಸಿನಿಮಾ ಮಂದಿರ ತೆರೆಯುವಂತಿಲ್ಲ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.
ಹೆಚ್ಚು ಜನರನ್ನು ಒಳಗೊಂಡಂತೆ ಚಿತ್ರೀಕರಣ ಮಾಡುವಂತಿಲ್ಲ. ಶೂಟಿಂಗ್‌ನಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗಳು ಕೊರೊನಾ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು. ಆ ಪ್ರಮಾಣಪತ್ರ 15 ದಿನಗಳು ಕಾಲ ಚಾಲ್ತಿಯಲ್ಲಿರುತ್ತದೆ. ಏಪ್ರಿಲ್ 10 ರಿಂದ ಈ ನಿಯಮಗಳು ಅನ್ವಯವಾಗಲಿದೆ. ಏಪ್ರಿಲ್ 30 ರವರೆಗೂ ಜಾರಿಯಲ್ಲಿರಲಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್ ನಲ್ಲಿ ಲಾಕ್ ಡೌನ್ ಜಾರಿ ಮಾಡುವ ಚಿಂತನೆಯಲ್ಲೂ ಸರ್ಕಾರ ಇದೆ. ಹೀಗೇ ಕೊರೊನಾ ಹಾವಳಿ ಮುಂದುವರೆದ್ರೆ ಸಂಪೂರ್ಣ ಲಾಕ್ ಡೌನ್ ಮಾಡುದ್ರೂ ಆಶ್ಚರ್ಯ ಪಡಬೇಕಿಲ್ಲ.
ಇದು ಮಹಾರಾಷ್ಟ್ರದ ಕತೆ.. ಕರ್ನಾಟಕದಲ್ಲೂ ಕೂಡ ಹೆಚ್ಚೇನು ವ್ಯತ್ಯಾಸವಿಲ್ಲ. ಇತ್ತೀಚೆಗೆ ಸರ್ಕಾರ ಥಿಯೇಟರ್ ಗಳಲ್ಲಿ 50 % ಸಾಮರ್ಥ್ಯಕ್ಕೆ ನಿರ್ಬಂಧ ಹೇರಿತ್ತು. ಆದ್ರೆ ಯುವರತ್ನ ಟೀಂ, ಅಪ್ಪು ಅಭಿಮಾನಿಗಳು, ಸಿನಿಮಾ ಮಂದಿಯ ಆಕ್ರೋಶಕ್ಕೆ ಮಣಿದ ಸರ್ಕಾರ ಏಪ್ರಿಲ್ 7 ರವರೆಗೂ ಹೌಸ್ ಫುಲ್ ಗೆ ಅವಕಾಶ ಮಾಡಿದೆ. ಅದಾದ ನಂತರ 50% ಗೆ ಇಳಿಸಿದ್ದು, ಮತ್ತೆ ಸಿನಿಮಾ ಮಂದಿ ಇದರ ವಿರುದ್ಧ ಹೋರಾಟ ಮಾಡುವ ಸಾಧ್ಯತೆ ಇದೆ. ಇನ್ನೂ ಕರ್ನಾಟಕದಲ್ಲೂ ದಿನೇ ದಿನೇ ಕೊರೊನಾ ಕೇಸಸ್ ಹೆಚ್ಚಾಗ್ತಲೇ ಇದ್ದು, ಇಲ್ಲೂ ಕೂಡ, ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್, ಸಿನಿಮಾ ಮಂದಿರಗಳ ಕಂಪ್ಲೀಟ್ ಬಂದ್, ಎಲ್ಲಕ್ಕೂ ಮೀರಿ ಪೂರ್ಣ ಲಾಕ್ ಡೌನ್ ಮಾಡಬಹುದು, ಮಾಡಲೇ ಬೇಕಾದ ಅನಿವಾರ್ಯತೆ ಬಂದರೂ ಬರಬಹುದು..
ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..!
ನಾನು ಬೆಸ್ಟ್ ಪ್ಲೇಯರ್..ನನ್ನ ಹೆಸರು ಚಿರಪರಿಚಿತ… ಹಾಗಿದ್ರೆ ನನ್ನ ಹೆಸರೇನು..?
ಯುವರತ್ನ ಸಿನಿಮಾ ನೋಡಿ ಆ ಮಾತು ಹೇಳಿದ್ದೇಕೆ ರಕ್ಷಿತ್..!
ಒಂದು ವರ್ಷದ ಮಗುವಿನ ಪಾಲಿಗೆ ಅಪದ್ಬಾಂದವನಾದ ನಟ ಸೋನು ಸೂದ್