ಬೆಂಗಳೂರನಲ್ಲಿ ಆರಂಭವಾಗಿದೆ ಕ್ಲಸ್ಟರ್ ಜೋನ್‍ಗಳು

1 min read
Cluster zone Saaksha Tv

ಬೆಂಗಳೂರನಲ್ಲಿ ಆರಂಭವಾಗಿದೆ ಕ್ಲಸ್ಟರ್ ಜೋನ್‍ಗಳು Saaksha Tv

ಬೆಂಗಳೂರು: ನಗರದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವುದರಿಂದ ಸರಕಾರ ಮಹತ್ವದ ಆದೇಶ ಹೊಡಿಸಿದೆ. ಯಾವುದೇ ಒಂದು ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ಅದನ್ನು ಕ್ಲಸ್ಟರ್ ಜೋನ್ ಎಂದು ಪರಿಗಣಿಸಲಾಗುತ್ತದೆ.

ನಗರ ಪ್ರದೇಶಗಳಲ್ಲಿ 50 ಮೀಟರ್ ರೇಡಿಯಸ್‍ನಲ್ಲಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕ್ಲಸ್ಟರ್ ಜೋನ್ ಮತ್ತು ನಗರ ಪ್ರದೇಶಗಳಲ್ಲಿ ಒಂದು ಅಥವಾ 100 ಮೀಟರ್ ನಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡರೆ ದೊಡ್ಡ ಕ್ಲಸ್ಟರ್ ಜೋನ್, ಅಪಾರ್ಟ್‍ಮೆಂಟ್‍ಗಲ್ಲಿ ಆಯಾ ಮಹಡಿಗಳನ್ನು ಕಂಟೈನ್‍ಮೆಂಟ್ ಜೋನ್ ಎಂದು ಪರಿಗಣಿಸಲಾಗುವುದು.

ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಸೋಂಕು ಕಾಣಿಸಿಕೊಂಡರೆ ಮೈಕ್ರೋ ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗುತ್ತದೆ. ಗ್ರಾಮೀಣದಲ್ಲಿ 15ಕ್ಕಿಂತ ಅಥವಾ ಅದಕ್ಕಿಂತ ಹೆಚ್ಚು ಕೇಸ್‍ಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್ ಮತ್ತು ಎಂದು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd