6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲೂ ಸಾಧ್ಯವೇ ಇಲ್ಲ –  ಬಿಎಸ್ ವೈ

1 min read
b s yediyurappa

6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲೂ ಸಾಧ್ಯವೇ ಇಲ್ಲ –  ಬಿಎಸ್ ವೈ

ಬೆಳಗಾವಿ : ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.

ಆದ್ರೆ ಮುಷ್ಕರದ ಹಿಂದಿನ ದಿನವೂ ಬೆಳವಾಗಿಯಲ್ಲಿ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಾರಿಗೆ ನೌಕರರ 9 ಬೇಡಿಕೆಯಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇವೆ. ಕೊವಿಡ್‌ನಿಂದ ಎದುರಾದ ಆರ್ಥಿಕ ಸಂಕಷ್ಟದ ನಡುವೆಯೂ ವೇತನ ನೀಡಿದ್ದೇವೆ. ಸರ್ಕಾರದಿಂದಲೇ 1200 ಕೋಟಿ ರೂ. ಸಂಬಳ ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ.

ರಾಜ್ಯದಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ. 8% ವೇತನ ಹೆಚ್ಚಳಕ್ಕೆ ಯೋಚನೆ ಮಾಡುತ್ತಿದ್ದೇವೆ. ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ಸತ್ಯಾಗ್ರಹ ಮಾಡಿಸಲಾಗುತ್ತಿದೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ ಎಂದಿದ್ದರು. ಆದ್ರೆ ಸಾರಿಗೆ ನೌಕರರು ಇದ್ಯಾವುದಕ್ಕೂ ಕೇರ್ ಮಾಡದೇ ಇಂದು ರಾಜ್ಯಾದ್ಯಂತೆ ಪ್ರತಿಭಟನೆ ಕೈಗೊಂಡಿದ್ದಾರೆ.

BIGGBOSS 8 – ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ – ಮನೆಗೆ ಬರಲಿರುವ ಈ ಸುಂದರಿ ಯಾರು ಗೊತ್ತಾ..?

BIGGBOSS 8 – ರಘು – ಚಕ್ರವರ್ತಿ ನಡುವೆ ಬಿಗ್ ಫೈಟ್ …! ನಿವಾಗ್ಲೂ ಚಕ್ರವರ್ತಿ ಅವರೇ ಸೀಕ್ರೆಟ್ ಏಜೆಂಟಾ….?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd