ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಸಾಮರಸ್ಯ ನಡಿಗೆ ಪಾದಯಾತ್ರೆ
ಕೊಪ್ಪಳ: ರಾಜ್ಯದಲ್ಲಿ ಸೌಹಾರ್ದತೆ ಸಾರುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಸಾಮರಸ್ಯ ನಡಿಗೆ ಪಾದಯಾತ್ರೆ ನಡೆದಿದೆ.
ಆನೆಗುಂದಿಯಲ್ಲಿರುವ ದುರ್ಗಾದೇವಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ನಾಯಕರು ಆನೆಗುಂದಿಯಿಂದ – ಅಂಜನಾದ್ರಿವರೆಗೆ ನಡೆದ ಪಾದಯಾತ್ರೆಯಲ್ಲಿ ವೀಣಾ ಕಾಶಪ್ಪನವರ್ ಜತೆಗೆ ಸ್ಥಳೀಯ ಕಾಂಗ್ರೆಸ್ ನಾಯಕರೂ ಮತ್ತು ಅವರ ಅನೇಕ ಬೆಂಬಲಿಗರು ಸಾಥ್ ನೀಡಿದ್ದಾರೆ.
ಈ ಸಾಮರಸ್ಯ ನಡಿಗೆಯಲ್ಲಿ ಕೇಸರಿ ಶಾಲು ಧರಿಸಿ ಪಾದಯಾತ್ರೆ ನಡೆಸಿದ ಇಕ್ಬಾಲ್ ಅನ್ಸಾರಿ ಬೆಂಬಲಿಗ ಶ್ಯಾಮೀದ್ ಮನಿಯಾರ್ ಎಲ್ಲರ ಗಮನ ಸೆಳೆದರು. ಸದ್ಯ ರಾಜ್ಯದಲ್ಲಿ ಸೌಹಾರ್ದತೆ ಕದಡುವ ಒಂದಲ್ಲ ಒಂದು ಘಟನೆಗಳು, ಪ್ರಕರಣಗಳು ನಡೆಯುತ್ತಿರುವ ಹಿನ್ನಲೆಯಲ್ಲಿ, ಅದೆಲ್ಲ ನಿಯಂತ್ರವಾಗಬೇಕೆಂಬ ಸಂದೇಶ ಹೊತ್ತ ಪಾದಯಾತ್ರೆಯಾಗಿದೆ.
ಪಾಯಾತ್ರೆಯ ಬಗ್ಗೆ ಎರಡು ದಿನಗಳ ಹಿಂದೆ ಮಾಹಿತಿ ನೀಡಿದ್ದ ವೀಣಾ ಕಾಶಪ್ಪನವರ್, ನಾವು ಯಾವುದೇ ಪಕ್ಷದಿಂದ ಪಾದಯಾತ್ರೆ ನಡೆಸುತ್ತಿಲ್ಲ. ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಎಂಬ ಆಶಯದಿಂದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದರು.
ಅಲ್ಲದೇ ಕೊಪ್ಪಳದಲ್ಲಿರುವ ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳ. ಈ ಕುರಿತು ದಾಖಲೆಗಳಿವೆ. ಸರಕಾರ ಇದನ್ನೇಲ್ಲ ಪರಿಗಣಿಸಿ, ಸದ್ಯ ಇರುವ ವಿವಾದಕ್ಕೆ ಕೊನೆ ಹಾಡಬೇಕು ಎಂದು ಆಗ್ರಹಿಸಿದರು