ಗ್ಯಾಸ್, ತೈಲ ಬೆಲೆ ಏರಿಕೆ : ಬೆಂಗಳೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ನಿರಂತರವಾಗಿ ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಜಮಾಯಿಸಿದ ಕೈ ಕಲಿಗಳು, ಸ್ಥಳದಲ್ಲೇ ಸೌದೆ ಬಳಸಿ ಅಡುಗೆ ತಯಾರಿಸಿ ಆಕ್ರೋಶ ಹೊರಹಾಕಿದರು. ಈ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡನೆ ವ್ಯಕ್ತಪಡಿಸಿದರು.
ಇದಾದ ಬಳಿಕ ಡಿಸೇಲ್ ,ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ ಹೇರಿ ಪ್ರತಿಭಟನೆ ನಡೆಸಿದರು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನ ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಬೆಂಗಳೂರುನಗರ ಜಿಲ್ಲಾಧಿಕಾರಿ ಜಿ ಎನ್ ಶಿವಮೂರ್ತಿ ಭೇಟಿ ನೀಡಿದರು.
ಇದಾದ ಬಳಿಕ ರಸ್ತೆಯಲ್ಲಿ ಬಾಳೆಕಾಯಿ ಬಜ್ಜಿ, ಚಿತ್ರಾನ್ನ, ಬದನೆಕಾಯಿ ಸಾಂಬರ್ ಸೇರಿ ವಿವಿಧ ಖಾದ್ಯಗಳನ್ನು ಮಾಡಿ ರಸ್ತೆಯಲ್ಲಿ ಅಡುಗೆ ಮಾಡಿ ತಿನ್ನುವ ಮೂಲಕ ಅಕ್ರೋಶ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel