ಮುಂಬೈ ಬಂದರಿನಿಂದ 22 ಟನ್ ಹೆರಾಯಿನ್ ವಶಕ್ಕೆ
ಹೆರಾಯಿನ್‌ನ ವಶಪಡಿಸಿಕೊಂಡ ಅತಿದೊಡ್ಡ ಪ್ರಕರಣಗಳಲ್ಲಿ, ಹೆರಾಯಿನ್ ಲೇಪಿತ 20 ಟನ್‌ಗಳಿಗಿಂತ ಹೆಚ್ಚು ಲೈಕೋರೈಸ್ ಹೊಂದಿರುವ ಕಂಟೇನರ್ ಅನ್ನು ಮುಂಬೈನ ನವ ಶೇವಾ ಬಂದರಿನಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ದೆಹಲಿ ಪೊಲೀಸ್ ವಿಶೇಷ ದಳದ ವಿಶೇಷ ಆಯುಕ್ತ ಎಚ್‌ಜಿಎಸ್ ಧಲಿವಾಲ್ ಅವರು, 22 ಟನ್ ತೂಕದ ಲೈಕೋರೈಸ್ ಮೇಲೆ ಲೇಪಿತ ಹೆರಾಯಿನ್‌ನ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಸಾವಿರದ ಏಳು ನೂರ ಇಪ್ಪತ್ತೈದು ಕೋಟಿ ರೂಪಾಯಿಗಳು ಎಂದು ತಿಳಿಸಿದ್ದಾರೆ.
ಕಂಟೈನರ್ ಅನ್ನು ದೆಹಲಿಗೆ ಸಾಗಿಸಲಾಗಿದೆ. ನಾರ್ಕೋ ಭಯೋತ್ಪಾದನೆ ನಮ್ಮ ದೇಶದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಮತ್ತು ಅಂತಾರಾಷ್ಟ್ರೀಯ ವ್ಯಕ್ತಿಗಳು ಡ್ರಗ್ಸ್ ಅನ್ನು ನಮ್ಮ ದೇಶಕ್ಕೆ ತಳ್ಳಲು ವಿವಿಧ ವಿಧಾನಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಈ ವಶಪಡಿಸಿಕೊಳ್ಳುವಿಕೆ ಸೂಚಿಸುತ್ತದೆ ಎಂದು ಧಲಿವಾಲ್ ಹೇಳಿದ್ದಾರೆ.