ನವರಾತ್ರಿಗೆ ಪ್ರತಿದಿನ ಮಾಡಿ ವಿವಿಧ ರೀತಿಯ ಸಿಹಿ ತಿಂಡಿಗಳು..! ಇಲ್ಲಿವೆ 15 ರೆಸಿಪಿಗಳು
1. ಕ್ಯಾರೆಟ್ ಹಲ್ವಾ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ – 4
ದಪ್ಪ ಹಾಲು – 3/4 ಲೀಟರ್
ತುಪ್ಪ - 3 ಚಮಚ
ಡ್ರೈ ಫ್ರೂಟ್ಸ್ – ಸ್ವಲ್ಪ
ರುಚಿಗೆ ತಕ್ಕಷ್ಟು ಸಕ್ಕರೆ
ಮಾಡುವ ವಿಧಾನ

ಮೊದಲಿಗೆ ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಕರಿದು ಇಟ್ಟುಕೊಳ್ಳಿ. ನಂತರ ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಕುಕ್ಕರ್ ಗೆ ಹಾಲು, ತುರಿದ ಕ್ಯಾರೆಟ್ ಹಾಕಿ ಒಂದು ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನೀರಿನಂಶ ಹಿಂಗಿ ಕ್ಯಾರೆಟ್ ಡ್ರೈ ಆಗುವವರೆಗೂ ಸೌಟ್ ನಿಂದ ಕೈಯಾಡಿಸುತ್ತಾ ಇರಿ. ನಂತರ ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧವಾಗಿದೆ. ಮೊದಲಿಗೆ ಗಸಗಸೆ, ಬಾದಾಮಿ, ಗೋಡಂಬಿಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ. ಅದಕ್ಕೆ ಕೊಬ್ಬರಿ ಸೇರಿಸಿ ಅಗತ್ಯವಿರುವಷ್ಟು ಹಾಲು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ನಂತರ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಪುಡಿ ಉದುರಿಸಿ. ಕೊನೆಯಲ್ಲಿ ತುಪ್ಪ, ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿದರೆ ರುಚಿಯಾದ ಗಸಗಸೆ ಪಾಯಸ ಸವಿಯಲು ಸಿದ್ಧವಾಗಿದೆ.
5 ವಿವಿಧ ಬಗೆಯ ರೊಟ್ಟಿಗಳ ರೆಸಿಪಿಗಳು ನಿಮಗಾಗಿ..!
2. ನೆಲಕಡಲೆ ಉಂಡೆ
ಬೇಕಾಗುವ ಸಾಮಗ್ರಿಗಳು
ಶೇಂಗಾ/ನೆಲಕಡಲೆ – 2 ಕಪ್
ಬೆಲ್ಲ – 2 ಕಪ್
ತುಪ್ಪ – 2 ಚಮಚ
ಮಾಡುವ ವಿಧಾನ:
ಮೊದಲಿಗೆ ನೆಲಕಡಲೆಯನ್ನು ಸಣ್ಣ ಉರಿಯಲ್ಲಿ ಹುರಿದು, ಅದರ ಸಿಪ್ಪೆಗಳನ್ನು ತೆಗೆಯಿರಿ. ಬಳಿಕ ನೆಲಕಡಲೆಗಳನ್ನು ಹುಡಿ ಮಾಡಿಕೊಳ್ಳಿ.

ನಂತರ ಬಾಣಲೆ ಬಿಸಿ ಮಾಡಿ ಬೆಲ್ಲವನ್ನು ಸೇರಿಸಿ, ಸ್ವಲ್ಪ ನೀರಿನ ಜೊತೆ ಕುದಿಯಿಸಿ. ಪಾಕ ಬಂದ ಬಳಿಕ ತುಪ್ಪವನ್ನು ಸೇರಿಸಿ ಮತ್ತು ಅದಕ್ಕೆ ಹುಡಿ ಮಾಡಿಕೊಂಡ ನೆಲಕಡಲೆ ಹುಡಿಯನ್ನು ಸೇರಿಸಿ. ಚೆನ್ನಾಗಿ ಕಲಸಿ. ಒಲೆಯಿಂದ ಕೆಳಗಿಳಿಸಿ, ಪಾಕ ಆರಿದ ನಂತರ ಉಂಡೆ ಕಟ್ಟಿ. ರುಚಿಯಾದ ನೆಲಕಡಲೆ ಉಂಡೆ ಸವಿಯಲು ಸಿದ್ಧವಾಗಿದೆ.
ಬಗೆ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ
3. ಉದ್ದಿನ ಬೇಳೆ ಲಡ್ಡು
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1/2 ಕಪ್
ಏಲಕ್ಕಿ ಪುಡಿ – 1/4 ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್
ಮಾಡುವ ವಿಧಾನ

ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ. ತುಪ್ಪ ಕರಗಿದ ಬಳಿಕ ಅದಕ್ಕೆ ಉದ್ದಿನ ಬೇಳೆ ಸೇರಿಸಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಗ್ರೈಂಡ್ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಿ ಈಗ ರುಚಿಯಾದ ಉದ್ದಿನಬೇಳೆಯ ಲಡ್ಡು ಸವಿಯಲು ಸಿದ್ಧವಾಗಿದೆ.
7 ವಿವಿಧ ಆರೋಗ್ಯಗರ ಜ್ಯೂಸ್ ಗಳ ರೆಸಿಪಿಗಳು
4. ಅವಲಕ್ಕಿ ಲಡ್ಡು
ಬೇಕಾಗುವ ಸಾಮಾಗ್ರಿ
ಅವಲಕ್ಕಿ – 2 ಕಪ್
ಬೆಲ್ಲ – 1 ಕಪ್
ತೆಂಗಿನ ಕಾಯಿತುರಿ – 1/2 ಕಪ್
ತುಪ್ಪ – 2 ಚಮಚ
ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಏಲಕ್ಕಿ- ಚಿಟಿಕೆಯಷ್ಟು
ಮಾಡುವ ವಿಧಾನ

ಮೊದಲಿಗೆ ಬಾಣಲೆ ಬಿಸಿ ಮಾಡಿ ಅವಲಕ್ಕಿಯನ್ನು 2 ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.
ನಂತರ ಬಾಣಲೆ ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿಯಿರಿ. ನಂತರ 1 ಕಪ್ ಬೆಲ್ಲಕ್ಕೆ 1 ಕಪ್ ನೀರನ್ನು ಸೇರಿಸಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ತೆಂಗಿನ ಕಾಯಿತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಕಡಿಮೆ ಉರಿಯಲ್ಲಿ ಬೇಯಿಸುತ್ತಾ ಏಲಕ್ಕಿ ಪುಡಿ ಮಿಶ್ರ ಮಾಡಿ. ಈಗ ಪುಡಿ ಮಾಡಿ ಇಟ್ಟುಕೊಂಡ ಅವಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ. ಬಿಸಿ ಇರುವಾಗಲೇ ಮಿಶ್ರಣದಿಂದ ಲಡ್ಡುಗಳನ್ನು ತಯಾರಿಸಿ ಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಡ್ಡು ಸವಿಯಲು ಸಿದ್ಧವಾಗಿದೆ.
5 ಸಿಂಪಲ್ ಮತ್ತು ಬಹಲ ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ..!
5. ಗೋಧಿ ಬಾದಾಮಿ ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ಬಾದಾಮಿ ಪುಡಿ – 1 ಕಪ್
ಒಣ ಖರ್ಜೂರ ಪುಡಿ – 3/4 ಕಪ್
ಏಲಕ್ಕಿ ಪುಡಿ – 1 ಚಮಚ
ಓಟ್ಸ್ ಪುಡಿ – 1/2 ಕಪ್
ಕಮಲದ ಬೀಜದ ಪುಡಿ – 1/2 ಕಪ್
ತೆಂಗಿನಕಾಯಿ ಹುಡಿ – 2 ಚಮಚ

ಮಾಡುವ ವಿಧಾನ
ಮೊದಲಿಗೆ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಸೇರಿಸಿ ಮತ್ತು ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿಯಿರಿ. ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿದ್ದಂತೆ ಬಾದಾಮಿ ಪುಡಿ, ಒಣ ಖರ್ಜೂರ ಪುಡಿ, ಏಲಕ್ಕಿ ಪುಡಿ, ಓಟ್ಸ್ ಪುಡಿ, ಕಮಲದ ಬೀಜದ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ನಂತರ ಸ್ವಲ್ಪ ತಣ್ಣಗಾಗಿಸಿ. ಬಳಿಕ ಅಗತ್ಯವಿದ್ದರೆ ತುಪ್ಪವನ್ನು ಸೇರಿಸಿ ಚೆನ್ನಾಗಿ ನಾದಿ. ನಂತರ ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿ ತೆಂಗಿನಕಾಯಿ ಹುಡಿ ಮೇಲೆ ಉರುಳಿಸಿ. ಈಗ ರುಚಿಯಾದ ಗೋಧಿ ಬಾದಾಮಿ ಲಡ್ಡು ಸವಿಯಲು ಸಿದ್ಧವಾಗಿದೆ.
4 ವಿವಿಧ ಬಗೆಯ ರುಚಿಕರ ಅಡುಗೆ ರೆಸಿಪಿಗಳು
6 . ಹೆಸರು ಹಿಟ್ಟಿನ ಲಾಡು
ಬೇಕಾಗುವ ಪದಾರ್ಥಗಳು:
ಹೆಸರು ಹಿಟ್ಟು – 1/2 ಕೆಜಿ
ಬೆಲ್ಲ- 300 ಗ್ರಾಂ
ಒಣ ಕೊಬ್ಬರಿ ಪುಡಿ/ತುರಿ – 1ಕಪ್
ಗೋಡಂಬಿ ಬಾದಾಮಿ – 1 ಕಪ್
ಏಲಕ್ಕಿ ಪುಡಿ – 1/2
ತುಪ್ಪ – 4 ಚಮಚ

ಮಾಡುವ ವಿಧಾನ:
ಮೊದಲಿಗೆ ಹೆಸರುಬೇಳೆಯನ್ನು ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ. ಬಳಿಕ ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿಕೊಳ್ಳಿ. ಬೆಲ್ಲವನ್ನು ಕರಗಿಸಿ , ಸೋಸಿ, ಎಳೆ ಪಾಕ ಬರುವವರೆಗೆ ಕುದಿಸಿ.
ನಂತರ ಬಾಣಲೆ ಬಿಸಿ ಮಾಡಿ ಅರ್ಧದಷ್ಟು ಹೆಸರು ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದು ತೆಗೆಯಿರಿ. ಈಗ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ
ನಂತರ ಪುಡಿ ಮಾಡಿದ ಗೋಡಂಬಿ ಬಾದಾಮಿ ಪುಡಿ ಸೇರಿಸಿ ಹುರಿಯಿರಿ. ನಂತರ ಹುರಿದಿಟ್ಟ ಹೆಸರು ಹಿಟ್ಟು ಸೇರಿಸಿ. ಒಣ ಕೊಬ್ಬರಿ ಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೆಲ್ಲದ ಪಾಕವನ್ನು ಸೇರಿಸಿ.ಚೆನ್ನಾಗಿ ಬೆರೆಸಿ, ಬಿಸಿ ಇದ್ದಾಗಲೇ ಉಂಡೆಯನ್ನು ಕಟ್ಟಿ. ರುಚಿಯಾದ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.
ವಿವಿಧ ಬಗೆಯ ಜ್ಯೂಸ್ / ಮಿಲ್ಕ್ ಶೇಕ್ ಗಳ ರೆಸಿಪಿಗಳು
7. ಅಕ್ಕಿ ಲಡ್ಡು
ಬೇಕಾಗುವ ಸಾಮಗ್ರಿಗಳು
ಅಕ್ಕಿ -3/4 ಕೆಜಿ
ತುಪ್ಪ – 1/2 ಕೆಜಿ
ಸಕ್ಕರೆ -1/2 ಕೆಜಿ
ಏಲಕ್ಕಿ – 4

ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಜರಡಿ ಹಿಡಿದು ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಬಿಸಿ ಮಾಡಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಉಂಡೆ ಕಟ್ಟಿ. ತುಪ್ಪ ಕಡಿಮೆಯಾದರೆ ಇನ್ನೂ ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ.. ಈಗ ಅಕ್ಕಿಯ ಲಡ್ಡು ಸವಿಯಲು ಸಿದ್ಧ.
5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
8. ಗಸಗಸೆ ಪಾಯಸ
ಬೇಕಾಗುವ ಸಾಮಗ್ರಿಗಳು
ಗಸಗಸೆ – 3 ಚಮಚ
ಬಾದಾಮಿ, ಗೋಡಂಬಿ – ಸ್ವಲ್ಪ
ಒಣಕೊಬ್ಬರಿ – 1/2 ಕಪ್
ಹಾಲು – ಸ್ವಲ್ಪ
ಬೆಲ್ಲ – 3/4 ಕಪ್
ನೀರು 1.5 ಕಪ್
ಏಲಕ್ಕಿ ಪುಡಿ – ಚಿಟಿಕೆಯಷ್ಟು
ತುಪ್ಪ – 2 ಚಮಚ
ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ – ಸ್ವಲ್ಪ
ಮಾಡುವ ವಿಧಾನ

ಮೊದಲಿಗೆ ಗಸಗಸೆ, ಬಾದಾಮಿ, ಗೋಡಂಬಿಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ. ಅದಕ್ಕೆ ಕೊಬ್ಬರಿ ಸೇರಿಸಿ ಅಗತ್ಯವಿರುವಷ್ಟು ಹಾಲು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ನಂತರ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಪುಡಿ ಉದುರಿಸಿ. ಕೊನೆಯಲ್ಲಿ ತುಪ್ಪ, ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿದರೆ ರುಚಿಯಾದ ಗಸಗಸೆ ಪಾಯಸ ಸವಿಯಲು ಸಿದ್ಧವಾಗಿದೆ.
5 ವಿವಿಧ ಬಗೆಯ ರುಚಿಕರ ಬೋಂಡಾಗಳ ರೆಸಿಪಿಗಳು ನಿಮಗಾಗಿ..!
9. ರವೆ ಹೆಸರುಬೇಳೆ ಪಾಯಸ
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ 1/2 ಕಪ್
ನೀರು 4 3/4 ಕಪ್
ರವೆ 1/4 ಕಪ್
ಬೆಲ್ಲ 3/4 ಕಪ್,
ಒಣ ಕೊಬ್ಬರಿ ತುರಿ 1/4 ಕಪ್,
ಹಾಲು 1/2 ಕಪ್,
ಹುರಿದ ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ

ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹೆಸರುಬೇಳೆಯನ್ನು ಒಂದೆರಡು ಬಾರಿ ತೊಳೆದು 4 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿ.
ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದಿಟ್ಟುಕೊಳ್ಳಿ.
ನಂತರ ಬಾಣಲೆಗೆ ರವೆ ಹಾಕಿ ಕೆಂಪು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.
ನಂತರ ರವೆಯನ್ನು ಮುಕ್ಕಾಲು ಕಪ್ ಬಿಸಿ ನೀರಿಗೆ ಸೇರಿಸಿ, ಗಂಟು ಕಟ್ಟದಂತೆ ನೋಡಿಕೊಳ್ಳಿ.
ನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಕರಗಿಸಿಟ್ಟುಕೊಂಡ ಬೆಲ್ಲವನ್ನು ಸಹ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣವು ಒಂದು ಕುದಿ ಬಂದ ನಂತರ ಒಣ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.
ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ. ಈಗ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ ಒಂದು ಕುದಿ ಬರೆಸಿ. ರುಚಿಯಾದ ರವೆ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.
10. ಹೆಸರುಬೇಳೆ ಪಾಯಸ
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ – 1 ಕಪ್
ಪುಡಿ ಮಾಡಿದ ಬೆಲ್ಲ – 11/2 ಕಪ್
ತೆಂಗಿನಕಾಯಿ ತುರಿ – 3/4 ಕಪ್
ಗೋಡಂಬಿ,ದ್ರಾಕ್ಷಿ, ಬಾದಾಮಿ – ಸ್ವಲ್ಪ
ಏಲಕ್ಕಿ ಪುಡಿ – 1ಚಮಚ
ಗಸಗಸೆ – 1ಚಮಚ
ತುಪ್ಪ- 1 ಚಮಚ
ಮಾಡುವ ವಿಧಾನ
ಮೊದಲಿಗೆ ಗಸಗಸೆ, ತೆಂಗಿನಕಾಯಿ ತುರಿ, ಬಾದಾಮಿ ಗೋಡಂಬಿ ಒಣದ್ರಾಕ್ಷಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ ಪೇಸ್ಟ್ ಮಾಡಿ.
ನಂತರ ಒಂದು ಪ್ಯಾನ್ ನಲ್ಲಿ ತುಪ್ಪ ಹಾಕಿ ಹೆಸರುಬೇಳೆಯನ್ನು ಹುರಿಯಿರಿ. ನಂತರ ಕುಕ್ಕರ್ ನಲ್ಲಿ ಅಗತ್ಯವಿರುವಷ್ಟು ನೀರು ಸೇರಿಸಿ 3 ವಿಸಲ್ ಬರುವವರೆಗೆ ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಅದಕ್ಕೆ ಪುಡಿ ಮಾಡಿದ ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಮ್ಯಾಶ್ ಮಾಡಿದ ಹೆಸರುಬೇಳೆಯನ್ನು ಸೇರಿಸಿ. ಅದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಕುದಿ ಬರಿಸಿ. ಈಗ ಬಿಸಿ ಬಿಸಿ ಹೆಸರುಬೇಳೆ ಪಾಯಸ ಸವಿಯಲು ಸಿದ್ಧವಾಗಿದೆ.
5 ಸುಲಭ ಬ್ರೇಕ್ ಫಾಸ್ಟ್ ರೆಸಿಪಿಗಳು – ರೈಸ್ ಬಾತ್ / ಪಲಾವ್ / ಪ್ರೈಡ್ ರೈಸ್..!
11. ಸಬ್ಬಕ್ಕಿ ಖೀರು
ಬೇಕಾಗುವ ಸಾಮಗ್ರಿಗಳು
ಸಾಗು/ಸಬ್ಬಕ್ಕಿ 1ಕಪ್
ನೀರು 1ಕಪ್
ಸಕ್ಕರೆ 1ಕಪ್
ಹಾಲು 1/2 ಲೀಟರ್
ತುಪ್ಪ ಸ್ವಲ್ಪ
ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ
ಏಲಕ್ಕಿ ಹುಡಿ 1/4 ಚಮಚ

ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ 1ಕಪ್ ಸಬ್ಬಕ್ಕಿಯನ್ನು ಹುರಿದು ಇಟ್ಟು ಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಸಿ. ನಂತರ ಸಬ್ಬಕ್ಕಿಯನ್ನು ಸೇರಿಸಿ ಕುದಿಯಲು ಬಿಡಿ. ಸಬ್ಬಕ್ಕಿ ಬೆಂದ ಬಳಿಕ ಅದಕ್ಕೆ ಒಂದು ಕಪ್ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ಬಳಿಕ ಸ್ಟವ್ ಆಫ್ ಮಾಡಿ.
ಈಗ ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣ ದ್ರಾಕ್ಷಿಗಳನ್ನು ಹುರಿಯಿರಿ. ನಂತರ ಇದನ್ನು ಸಬ್ಬಕ್ಕಿ ಖೀರಿಗೆ ಸೇರಿಸಿ, ಕಲಸಿ. ಸಬ್ಬಕ್ಕಿ ಖೀರು ತಣ್ಣಗಾದ ಮೇಲೆ ಬೇಕಾದಷ್ಟು ಹಾಲು ಸೇರಿಸಿ ಕಲಸಿ. ಇದನ್ನು ರೆಫ್ರಿಜರೇಟರ್ ನಲ್ಲಿಟ್ಟು ತಣ್ಣಗಾದ ಮೇಲೆ ಸರ್ವ್ ಮಾಡಿ.
3 ಸುಲಭ ಮತ್ತು ಬಹಳ ರುಚಿಕರ ಮೊಟ್ಟೆಯಿಂದ ತಯಾರಿಸಬಹುದಾದ ಅಡುಗೆಗಳು..!
12. ಹೆಸರುಬೇಳೆ ಸಬ್ಬಕ್ಕಿ ಪಾಯಸ
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ – 1ಕಪ್
ಸಬ್ಬಕ್ಕಿ – 1/2 ಕಪ್
ತೆಂಗಿನತುರಿ – 1ಕಪ್
ಗಸಗಸೆ – 2 ಚಮಚ
ಅಕ್ಕಿ – 2 ಚಮಚ
ಏಲಕ್ಕಿ – 2 ಎಸಳು
ಬೆಲ್ಲ – 1 1/2 ಕಪ್
ಗೋಡಂಬಿ ದ್ರಾಕ್ಷಿ ತುಪ್ಪ – ಸ್ವಲ್ಪ
ಮಾಡುವ ವಿಧಾನ

ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು ಇಟ್ಟುಕೊಳ್ಳಿ. ನಂತರ ಗಸಗಸೆ, ಅಕ್ಕಿ, ಹೆಸರುಬೇಳೆಗಳನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಿ. ಬಳಿಕ ಕುಕ್ಕರ್ ಗೆ ಹುರಿದ ಹೆಸರುಬೇಳೆ, ಸಬ್ಬಕ್ಕಿಯನ್ನು ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ 3 ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ.
ಈಗ ತೆಂಗಿನತುರಿ, ಏಲಕ್ಕಿ, ಹುರಿದಿಟ್ಟುಕೊಂಡ ಗಸಗಸೆ ಮತ್ತು ಅಕ್ಕಿಯ ಜೊತೆಗೆ ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಬೆಲ್ಲಕ್ಕೆ ನೀರು ಹಾಕಿ ಕುದಿಸಿ ಇಟ್ಟುಕೊಳ್ಳಿ.
ಈಗ ಪಾತ್ರೆಗೆ ನೀರು ಮತ್ತು ಬೆಲ್ಲ ಸೇರಿಸಿ ಕುದಿಸಿ. ಬೆಲ್ಲದ ಪಾಕ ಸಿದ್ಧವಾದ ಬಳಿಕ ಅದಕ್ಕೆ ಬೇಯಿಸಿ ಇಟ್ಟುಕೊಂಡ ಹೆಸರುಬೇಳೆ, ಸಬ್ಬಕ್ಕಿ ಮತ್ತು ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕಲಸಿ ಕುದಿಸಿ. ಕುದಿ ಬಂದ ನಂತರ ಹುರಿದ ಗೋಡಂಬಿ ದ್ರಾಕ್ಷಿ ಗಳನ್ನು ಸೇರಿಸಿ. ಈಗ ರುಚಿಯಾದ ಹೆಸರುಬೇಳೆ ಸಬ್ಬಕ್ಕಿ ಪಾಯಸ ಸವಿಯಲು ಸಿದ್ಧವಾಗಿದೆ.
5 ವಿವಿಧ ಬಗೆಯ ರುಚಿಕರ ವಡೆಗಳ ರೆಸಿಪಿಗಳು
13. ಗೋಧಿ ಮತ್ತು ರಾಗಿಯ ಬರ್ಫಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1ಕಪ್
ರಾಗಿ ಹಿಟ್ಟು – 1ಕಪ್
ಹಾಲು – 1ಕಪ್
ತೆಂಗಿನಕಾಯಿತುರಿ – 1 ಕಪ್
ಎಣ್ಣೆ – 1 ಕಪ್
ಸಕ್ಕರೆ – 1 ಕಪ್
ತುಪ್ಪ – 2 – 3 ಚಮಚ
ಏಲಕ್ಕಿ ಪುಡಿ – ಚಿಟಿಕೆಯಷ್ಟು

ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು, ರಾಗಿ ಹಿಟ್ಟುಗಳನ್ನು ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕೈಯಾಡಿಸುತ್ತಾ ಇರಿ. ಮಿಶ್ರಣ ತಳ ಬಿಡುವಾಗ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ತುಪ್ಪ ಹಚ್ಚಿದ ತಟ್ಟೆಗೆ ಈ ಮಿಶ್ರಣವನ್ನು ವರ್ಗಾಯಿಸಿ. ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ರುಚಿಯಾದ ಗೋಧಿ ಮತ್ತು ರಾಗಿಯ ಬರ್ಫಿ ಸವಿಯಲು ಸಿದ್ಧವಾಗಿದೆ.
5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!
14. ರುಚಿಯಾದ ಚಿರೋಟಿ
ಬೇಕಾಗುವ ಸಾಮಾಗ್ರಿಗಳು
ಮೈದಾ -1 ಕಪ್
ಚಿರೋಟಿ ರವೆ – 2 ಚಮಚ
ಬಿಸಿ ಎಣ್ಣೆ 1ಚಮಚ
ಚಿಟಿಕೆಯಷ್ಟು ಉಪ್ಪು
ಅಕ್ಕಿ ಹಿಟ್ಟು – 2 ಚಮಚ
ತುಪ್ಪ – 4 ಚಮಚ
ಸಕ್ಕರೆ ಪುಡಿ ಕೊನೆಯಲ್ಲಿ ಉದುರಿಸಲು
ಏಲಕ್ಕಿ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ ಹಾಗೆ ಇಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ಮೈದಾ, ಚಿರೋಟಿ ರವೆ, ಉಪ್ಪು ಸೇರಿಸಿ ಕಲಸಿ. ಅದಕ್ಕೆ ಬಿಸಿ ಮಾಡಿದ ಎಣ್ಣೆ ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿಕೊಳ್ಳಿ.
ನಂತರ ಲಟ್ಟಿಸಿಕೊಂಡಿರುವ ಚಪಾತಿಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ಮತ್ತೊಂದು ಚಪಾತಿ ಇಡಿ. ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ಮತ್ತೊಂದು ಚಪಾತಿಯನ್ನಿಡಿ. ಹೀಗೆ 5 ಚಪಾತಿ ಗಳನ್ನು ಒಂದರ ಮೇಲೊಂದು ಇಟ್ಟು ನಂತರ ರೋಲ್ ಮಾಡಿ.
ನಂತರ ಚಿಕ್ಕ ಪೂರಿ ಅಳತೆಯಲ್ಲಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಕರಿದು ತೆಗೆದು ಬಿಸಿ ಇರುವಾಗಲೇ ಸಕ್ಕರೆ ಏಲಕ್ಕಿ ಪುಡಿ ಉದುರಿಸಿ. ಈಗ ರುಚಿಯಾದ ಚಿರೋಟಿ ಸವಿಯಲು ಸಿದ್ಧವಾಗಿದೆ. ಇದನ್ನು ಹಾಲಿನ ಜೊತೆಗೆ ಅಥವಾ ಬಾದಾಮಿ ಹಾಲಿನ ಜೊತೆ ಸವಿಯಬಹುದು.
15. ಗೋದಿ ಹಿಟ್ಟು ಬೆಲ್ಲದ ಹಲ್ವಾ
ಬೇಕಾಗುವ ಸಾಮಾಗ್ರಿಗಳು
ಗೋದಿ ಹಿಟ್ಟು – 2 ಕಪ್
ಬೆಲ್ಲ – 1 ಕಪ್
ಬಿಸಿ ನೀರು – 1 1/2 ಕಪ್
ತುಪ್ಪ - 1 ಕಪ್
ಏಲಕ್ಕಿ ಪುಡಿ – 1/4 ಚಮಚ
ಹುರಿದ ಡ್ರೈ ಫ್ರೂಟ್ಸ್ – ಸ್ವಲ್ಪ
ಮಾಡುವ ವಿಧಾನ

ಮೊದಲಿಗೆ ಪ್ಯಾನ್ ಗೆ ಅರ್ಧ ಕಪ್ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಕರಗಿದ ಬಳಿಕ ಗೋದಿ ಹಿಟ್ಟನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.
ನಂತರ ಬೆಲ್ಲ ಸೇರಿಸಿ. ಬಿಸಿ ನೀರನ್ನು ನಿಧಾನವಾಗಿ ಗಂಟಿಲ್ಲದ ಹಾಗೆ ತಿರುಗಿಸುತ್ತಾ ಬೆರೆಸಿ. ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ತುಪ್ಪ ಮೇಲಕ್ಕೆ ತೇಲುವವರೆಗೆ ಕೈಯಾಡಿಸಿ. ಈಗ ಏಲಕ್ಕಿ ಹುಡಿ ಮತ್ತು ಹುರಿದ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿ. ಈಗ ರುಚಿಯಾದ ಗೋಧಿ ಹಿಟ್ಟು ಬೆಲ್ಲದ ಹಲ್ವಾ ಸವಿಯಲು ಸಿದ್ಧವಾಗಿದೆ.








