5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
1. ತರಕಾರಿಗಳಿಲ್ಲದ ಸರಳವಾದ ಸಾಂಬಾರ್
ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ (ದಾಲ್) – 11/2 ಕಪ್
ಮಧ್ಯಮ ಗಾತ್ರದ ಈರುಳ್ಳಿ 1
ನೀರು 4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುಣಸೆಹಣ್ಣಿನ ಪೇಸ್ಟ್ 1 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಕೊತ್ತಂಬರಿ ಹುಡಿ 2 ಟೀಸ್ಪೂನ್
ಮೆಂತ್ಯ ಹುಡಿ 1/4 ಟೀಸ್ಪೂನ್
ಸಾಂಬಾರ್ ಪುಡಿ (ಸಾಂಬಾರ್ ಮಸಾಲ) 2 ಟೀಸ್ಪೂನ್
Saakshatv cooking recipes Simple Sambar
ಮಾಡುವ ವಿಧಾನ
1 ಟೀಸ್ಪೂನ್ ಹುಣಸೆಹಣ್ಣಿನ ಪೇಸ್ಟ್ ಅನ್ನು ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷ ನೆನೆಸಿ ಫಿಲ್ಟರ್ ಮಾಡಿ ಇಡಿ.
ನಂತರ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ಹೋಳು ಮಾಡಿದ ಈರುಳ್ಳಿ ಜೊತೆಗೆ 2 ಕಪ್ ನೀರು ಸೇರಿಸಿ ಬೇಯಿಸಿ.
ಕುಕ್ಕರ್‌ನಲ್ಲಿ 3 ವಿಸಿಲ್ ಹಾಕಿಸಿ. ನಂತರ ಪಾತ್ರೆಗೆ ವರ್ಗಾಯಿಸಿ.
ಇದಕ್ಕೆ ಉಳಿದ 2 ಕಪ್ ನೀರು, ಹುಣಸೆಹಣ್ಣು, ಉಪ್ಪು ಮತ್ತು ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಹುಡಿ, ಮೆಂತ್ಯ ಹುಡಿ ಮತ್ತು ಸಾಂಬಾರ್ ಮಸಾಲೆ ಸೇರಿಸಿ, ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷಗಳ ಕಾಲ ಮಧ್ಯಮ ಜ್ವಾಲೆಯಲ್ಲಿ ಕುದಿಸಿ. ಈಗ ಬಿಸಿ ಬಿಸಿಯಾದ ಸಾಂಬಾರ್ ಸವಿಯಲು ಸಿದ್ಧವಾಗಿದೆ.
ಈ ಸರಳವಾದ ಸಾಂಬಾರ್ ಇಡ್ಲಿ ಅಥವಾ ದೋಸೆ ಅಥವಾ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
2. ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಸಾಗು/ಸಬ್ಬಕ್ಕಿ ಖೀರು
ಬೇಕಾಗುವ ಸಾಮಗ್ರಿಗಳು
ಸಾಗು/ಸಬ್ಬಕ್ಕಿ 1ಕಪ್
ನೀರು 1ಕಪ್
ಸಕ್ಕರೆ 1ಕಪ್
ಹಾಲು 1/2 ಲೀಟರ್
ತುಪ್ಪ ಸ್ವಲ್ಪ
ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ
ಏಲಕ್ಕಿ ಹುಡಿ 1/4 ಚಮಚ
Saakshatv cooking recipes sabbakki kheer
ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ 1ಕಪ್ ಸಬ್ಬಕ್ಕಿಯನ್ನು ಹುರಿದು ಇಟ್ಟು ಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಸಿ. ನಂತರ ಸಬ್ಬಕ್ಕಿಯನ್ನು ಸೇರಿಸಿ ಕುದಿಯಲು ಬಿಡಿ. ಸಬ್ಬಕ್ಕಿ ಬೆಂದ ಬಳಿಕ ಅದಕ್ಕೆ ಒಂದು ಕಪ್ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ಬಳಿಕ ಸ್ಟವ್ ಆಫ್ ಮಾಡಿ.
ಈಗ ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣ ದ್ರಾಕ್ಷಿಗಳನ್ನು ಹುರಿಯಿರಿ. ನಂತರ ಇದನ್ನು ಸಬ್ಬಕ್ಕಿ ಖೀರಿಗೆ ಸೇರಿಸಿ, ಕಲಸಿ.
ಸಬ್ಬಕ್ಕಿ ಖೀರು ತಣ್ಣಗಾದ ಮೇಲೆ ಬೇಕಾದಷ್ಟು ಹಾಲು ಸೇರಿಸಿ ಕಲಸಿ. ಇದನ್ನು ರೆಫ್ರಿಜರೇಟರ್ ನಲ್ಲಿಟ್ಟು ತಣ್ಣಗಾದ ಮೇಲೆ ಸರ್ವ್ ಮಾಡಿ.
5 ವಿಭಿನ್ನ , ಸುಲಭ ಹಾಗೂ ರುಚಿಕರ ಅಡುಗೆಗಳ ರೆಸಿಪಿಗಳು..!
3. ಸಬಕ್ಕಿ/ಸಾಬುದಾನಾ ವಡಾ
ಬೇಕಾಗುವ ಸಾಮಗ್ರಿಗಳು
ಸಬಕ್ಕಿ/ಸಾಬುದಾನಾ – 2 ಕಪ್
ನೆಲಕಡಲೆ/ಶೇಂಗಾ – ಕಾಲು ಕಪ್
ಬೇಯಿಸಿದ ಆಲೂಗಡ್ಡೆ-2-3
ಹಸಿಮೆಣಸಿನಕಾಯಿ ಶುಂಠಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
ಕೊತಂಬರಿ ಸೊಪ್ಪು- ಸ್ವಲ್ಪ
ಕರಿಯಲು ಎಣ್ಣೆ
Saakshatv cooking recipes Sabudaanaa vada
ಮಾಡುವ ವಿಧಾನ
ಸಬಕ್ಕಿ/ಸಾಬುದಾನಾ ಕಾಳುಗಳನ್ನು 1 ರಿಂದ 2 ಬಾರಿ ಗಂಜಿ ಹೋಗುವವರೆಗೆ ಚೆನ್ನಾಗಿ ನೀರಿನಿಂದ ತೊಳೆಯಿರಿ.
ನಂತರ ಸಾಬುದಾನಾ ಕಾಳುಗಳನ್ನು ಬೌಲ್‍ಗೆ ವರ್ಗಾಯಿಸಿ ಕಾಳುಗಳು ಮುಳುಗುವಷ್ಟು ನೀರು ಹಾಕಿ 5-6 ಗಂಟೆ ನೆನೆಯಲು ಬಿಡಿ.
ನೆಲಕಡಲೆ/ಶೇಂಗಾ ಹುರಿದು ತರಿ ತರಿಯಾಗಿ ಪುಡಿ ಮಾಡಿ..
ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ಕೊತಂಬರಿ ಸೊಪ್ಪು ತೊಳೆದು ಹೆಚ್ಚಿ ಹಾಕಿ.
ಈಗ ಒಂದು ಪಾತ್ರೆಯಲ್ಲಿ ನೆನೆಸಿಕೊಂಡ ಸಬ್ಬಕ್ಕಿ/ಸಾಬುದಾನ, ನೆಲಕಡಲೆ/ಶೇಂಗಾ ಪುಡಿ, ಪುಡಿ ಮಾಡಿದ ಆಲೂಗಡ್ಡೆ, ಕೊತಂಬರಿ ಸೊಪ್ಪು , ಹಸಿ ಮೆಣಸಿನಕಾಯಿ ಶುಂಠಿ ಪೇಸ್ಟ್, ಉಪ್ಪು ಎಲ್ಲವನ್ನೂ ಹಾಕಿ ಒಟ್ಟಿಗೆ ಚೆನ್ನಾಗಿ ಮಿಶ್ರಮಾಡಿ.
ಇವೆಲ್ಲವನ್ನು ಒಂದು ಹಿಟ್ಟಿನ ಮುದ್ದೆಯಂತೆ ಮಾಡಿ ಚೆನ್ನಾಗಿ ನಾದಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ, ಸ್ವಲ್ಪ ಚಪ್ಪಟೆಯ ಆಕಾರಕ್ಕೆ ತಿರುಗಿಸಿ ಟಿಕ್ಕಿಯನ್ನು ತಯಾರಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಟಿಕ್ಕಿಯನ್ನು ಬಿಡಿ. ಎರಡೂ ಬದಿಯನ್ನು ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಿ.
ಬಿಸಿ ಬಿಸಿ ಕ್ರಿಸ್ಪಿ , ಕ್ರಂಚಿ ಸಬಕ್ಕಿ/ಸಾಬುದಾನಾ ವಡಾವನ್ನು ಗ್ರೀನ್ ಚಟ್ನಿ ಮತ್ತು ಟೊಮ್ಯಾಟೋ ಸಾಸ್ ಜೊತೆ ಸವಿಯಿರಿ.
4 ವಿವಿಧ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
4. ಧಿಡೀರ್ (instant) ಅವಲಕ್ಕಿ ಗೋಧಿ ಹಿಟ್ಟು ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ತುಪ್ಪ 1ಕಪ್
ಅವಲಕ್ಕಿ 1 ಕಪ್
ಗೋಡಂಬಿ, ಬಾದಾಮಿ ಸ್ವಲ್ಪ
ಏಲಕ್ಕಿ ಪುಡಿ 1 ಚಮಚ
ಸಕ್ಕರೆ ಪುಡಿ 1 1/2 ಕಪ್
Saakshatv cooking recipes instant laddu
ಮಾಡುವ ವಿಧಾನ
ಅವಲಕ್ಕಿಯನ್ನು ಸಣ್ಣ ಉರಿಯಲ್ಲಿ 5 ನಿಮಿಷ ಹುರಿದು ಪುಡಿ ಮಾಡಿ.
ಒಂದು ಬಾಣಲೆಗೆ 1/2 ಕಪ್ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ ಗೋಡಂಬಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಮೊದಲೇ ಹುರಿದು ಪುಡಿ ಮಾಡಿಕೊಂಡ ಅವಲಕ್ಕಿ ಸೇರಿಸಿ.
ಅದಕ್ಕೆ ಸಕ್ಕರೆ ಪುಡಿ , ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ ನಂತರ ಸ್ಟವ್ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಅಳತೆಗೆ ಲಡ್ಡುಗಳನ್ನು ತಯಾರಿಸಿ
5 ವಿವಿಧ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
5. ಗೋಧಿ ಹಿಟ್ಟಿನ ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹುಡಿ 1ಕಪ್
ಮಿಲ್ಕ್ ಮೇಡ್ 3/4 ಕಪ್
ಏಲಕ್ಕಿ ಪುಡಿ 1/4 ಚಮಚ
ತುಪ್ಪ 2 1/2 ಚಮಚ.
ಹುರಿದ ಗೋಡಂಬಿ, ದ್ರಾಕ್ಷಿ ಸ್ವಲ್ಪ
ಕಾಯಿಸಿದ ಹಾಲು 4 ಚಮಚ
Saakshatv cooking recipes wheat laddu
ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಗೋಧಿ ಹುಡಿ ಹಾಕಿ ಮಧ್ಯಮ ಉರಿಯಲ್ಲಿ 3 ನಿಮಿಷ ಹುರಿಯಿರಿ. ನಂತರ ಸ್ಟವ್ ಆಫ್ ಮಾಡಿ ಬಾಣಲೆಯನ್ನು ಕೆಳಗಿಳಿಸಿ.
ನಂತರ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಇದಕ್ಕೆ ತುಪ್ಪ ಏಲಕ್ಕಿ ಪುಡಿ, ಗೋಡಂಬಿ ,ದ್ರಾಕ್ಷಿ, ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಕೈಗೆ ಸ್ವಲ್ಪ ತುಪ್ಪ ಸವರಿ ಗೋಧಿ ಲಡ್ಡುಗಳನ್ನು ತಯಾರಿಸಿ. ಗೋಧಿ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.