Cooking : ವಿವಿಧ ಬಗೆಯ 5 ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ
ಗಾರ್ಲಿಕ್ ಬ್ರೆಡ್ ಪಿಜ್ಜಾ
ಗಾರ್ಲಿಕ್ ಬ್ರೆಡ್ ಪಿಜ್ಜಾ
ಬೇಕಾಗುವ ಪದಾರ್ಥಗಳು
ಗಾರ್ಲಿಕ್ ಬ್ರೆಡ್ 1 ಪೌಂಡ್
ಸ್ವೀಟ್ ಕಾರ್ನ್ 1
ಕ್ಯಾಪ್ಸಿಕಂ 2
ಈರುಳ್ಳಿ 2
ಟೊಮೆಟೊ 2
ಟೊಮೆಟೊ ಸಾಸ್ ಅಗತ್ಯವಿರುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಪೆಪ್ಪರ್ ಅಗತ್ಯವಿರುವಷ್ಟು
ಬೆಣ್ಣೆ ಅಗತ್ಯವಿರುವಷ್ಟು
ತುರಿದ ಚೀಸ್
ಮಾಡುವ ವಿಧಾನ
ಕಡಾಯಿಯನ್ನು ಬಿಸಿ ಮಾಡಿ ಬೆಣ್ಣೆಯನ್ನು ಸೇರಿಸಿ. ಅದಕ್ಕೆ
ಕತ್ತರಿಸಿದ ಕ್ಯಾಪ್ಸಿಕಂ ಈರುಳ್ಳಿ ಸೇರಿಸಿ ಹುರಿಯಿರಿ. ಕಾರ್ನ್ ಸೇರಿಸಿ ಹುರಿಯಿರಿ.
ಸ್ವಲ್ಪ ಉಪ್ಪು ಸೇರಿಸಿ. ಗಾರ್ಲಿಕ್ ಬ್ರೆಡ್ ತುಂಡು ತೆಗೆದುಕೊಳ್ಳಿ ಅದರ ಮೇಲೆ ಟೊಮೆಟೊ ಸಾಸ್ ಹರಡಿ. ನಂತರ ಅದರ ಮೇಲೆ ಉಪ್ಪು ಪೆಪ್ಪರ್ ಸಿಂಪಡಿಸಿ. ಅದರ ಮೇಲೆ ಹುರಿದ ತರಕಾರಿ ಮಿಶ್ರಣವನ್ನು ಸೇರಿಸಿ. ನಂತರ ಟೊಮೆಟೊ ಅದರ ಮೇಲೆ ತುರಿದ ಚೀಸ್ ಇಡಿ.
ಬಳಿಕ ತವಾವನ್ನು ಬಿಸಿ ಮಾಡಿ, ಬೆಣ್ಣೆ ಸೇರಿಸಿ.. ಬ್ರೆಡ್ ತುಂಡುಗಳನ್ನು ಇರಿಸಿ … ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಚೀಸ್ ಕರಗುವ ತನಕ ಹುರಿಯಿರಿ. ರುಚಿಯಾದ ಗಾರ್ಲಿಕ್ ಪಿಜ್ಜಾ ಸವಿಯಿರಿ.
ಕ್ಯಾಬೇಜ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಸಣ್ಣಗೆ ಹೆಚ್ಚಿದ ಕ್ಯಾಬೇಜ್ – 2 ಕಪ್
ಕ್ಯಾರೆಟ್ – 1
ಮೆಣಸಿನ ಪುಡಿ – 1/2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೈದಾ – 1/2 ಕಪ್
ಕಾರ್ನ್ ಪ್ಲೋರ್ – 2 ಟೀಸ್ಪೂನ್
ನೀರು – 2 ಟೀಸ್ಪೂನ್
ಬೆಳ್ಳುಳ್ಳಿ – 6 ಎಸಳು
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಕ್ಯಾಪ್ಸಿಕಂ/ದೊಣ್ಣೆ ಮೆಣಸು – 1/2 ಕಪ್
ಟೊಮೆಟೊ ಸಾಸ್ – 1 ಟೀಸ್ಪೂನ್
ಗ್ರೀನ್ ಚಿಲ್ಲಿ ಸಾಸ್ – 1 ಟೀಸ್ಪೂನ್
ರೆಡ್ ಚಿಲ್ಲಿ ಸಾಸ್ – 1 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಕ್ಯಾಬೇಜ್, ತುರಿದ ಕ್ಯಾರೆಟ್ ಸೇರಿಸಿ. ನಂತರ ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೈದಾ, ಕಾರ್ನ್ ಪ್ಲೋರ್, ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಎರಡು ಟೇಬಲ್ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ.
ಈಗ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮಾಡಿಟ್ಟುಕೊಂಡ ಉಂಡೆಗಳನ್ನು ಕೆಂಪಗಾಗುವವರೆಗೆ ಹುರಿದು ತೆಗೆಯಿರಿ.
ಬಳಿಕ ಪಾನ್ ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ದೊಣ್ಣೆ ಮೆಣಸು ಸೇರಿಸಿ. ಬಳಿಕ ಟೊಮೆಟೊ ಸಾಸ್, ಗ್ರೀನ್ ಚಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ವಿನೆಗರ್, ಸೋಯಾ ಸಾಸ್ ಗಳನ್ನು ಮಿಶ್ರ ಮಾಡಿ. ನಂತರ ಸ್ವಲ್ಪ ಉಪ್ಪನ್ನು ಉದುರಿಸಿ. ಈಗ ಇದಕ್ಕೆ ಹುರಿದಿಟ್ಟ ಕ್ಯಾಬೇಜ್ ಉಂಡೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ರುಚಿಯಾದ ಕ್ಯಾಬೇಜ್ ಮಂಚೂರಿ ಸವಿಯಲು ಸಿದ್ಧವಾಗಿದೆ.
ಮದ್ದೂರು ವಡೆ
ರವಾ ಗೋಳಿ ಬಜೆ
ಬೇಕಾಗುವ ಸಾಮಗ್ರಿಗಳು :
ಚಿರೋಟಿ ರವೆ – 1ಕಪ್
ಸೋಡಾ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು 1/2 ಕಪ್
ಜೀರಿಗೆ – 1 ಚಮಚ
ಹೆಚ್ಚಿದ ಹಸಿಮೆಣಸಿನಕಾಯಿ – 1
ತುರಿದ ಶುಂಠಿ – 1ಇಂಚು
ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಕ್ಕರೆ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಚಿರೋಟಿ ರವೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಒಂದು ಅಗಲವಾದ ಪಾತ್ರೆಗೆ ಹಾಕಿ. ನಂತರ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. 2 ಗಂಟೆಗಳ ಕಾಲ ಹಾಗೆಯೇ ಬಿಡಿ.
ನಂತರ ಸೋಡಾ ಸೇರಿಸಿ ಬೆರೆಸಿ. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. 3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.