ದೀಪಾವಳಿ ಪ್ರಯುಕ್ತ ಜನರಿಗೆ ಮತ್ತೊಂದು ಗುಡ್ ನ್ಯೂಸ್ – ಅಡುಗೆ ಎಣ್ಣೆ ದರ ಇಳಿಕೆ

1 min read

ದೀಪಾವಳಿ ಪ್ರಯುಕ್ತ ಜನರಿಗೆ ಮತ್ತೊಂದು ಗುಡ್ ನ್ಯೂಸ್

ದೀಪಾವಳಿ ಸಂಭ್ರಮ  : ಅಡುಗೆ ಎಣ್ಣೆ ದರ ಇಳಿಕೆ

ಕೆಜಿಗೆ 20 ರೂವರೆಗೂ ದರ ಕಡಿಮೆಯಾಗಿರೋ ಅಡುಗೆ ಎಣ್ಣೆ ದರ

ದೀಪಾವಳಿ ಸಂಭ್ರಮವನ್ನ ಹೆಚ್ಚಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಿ ಜನರಿಗೆ ರಿಲೀಫ್ ನೀಡಿದ್ದವು.  ಇದೀಗ ಇದರ ಬೆನ್ನಲ್ಲೇ ಜನರಿಗೆ  ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರದಲ್ಲೂ ಇಳಿಕೆಯಾಗಿದ್ದು, ಹಬ್ಬದ ಖುಷಿ ಡಬಲ್ ಆಗಿದೆ. ಸಾಮನ್ಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಬಗ್ಗೆ ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುದಾಂಶು ಪಾಂಡೆ ಮಾಹಿತಿ ನೀಡಿದ್ದು, ಪ್ರತಿ ಕೆಜಿಗೆ 20 ರೂವರೆಗೂ ದರ ಕಡಿಮೆಯಾಗಿರೋದಾಗಿ ತಿಳಿಸಿದ್ದಾರೆ.

ಶೇಂಗಾ ಎಣ್ಣೆ , ಸೋಯಾಬೀನ್ ಎಣ್ಣೆ , ಫಾಮ್ ಎಣ್ಣೆ , ಸೂರ್ಯಕಾಂತಿ ಎಣ್ಣೆ ಸೇರಿದಂತೆ ಬಹುತೇಕ ಅಡುಗೆ ಎಣ್ಣೆಗಳ ದರ ಇಳಿಕೆಯಾಗಿದೆ. ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆಯಾದ ಬೆನ್ನಲ್ಲೇ ಅಡುಗೆ ಎಣ್ಣೆ ದರವು 7 -20 ರೂಪಾಯಿ ಕಡಿಮೆಯಾಗಿರೋದಾಗಿ ಶುಭಾಂಶು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd