Cooking : ಟೇಸ್ಟಿ ಪನ್ನೀರ್ ಟಿಕ್ಕಾ ಮನೆಯಲ್ಲೇ ಮಾಡಿ …. ರೆಸಿಪಿ ನೋಡಿ…!!
ಪನೀರ್ ತುಂಡು – 1 ½ ಕಪ್
ತ್ರಿಕೋನಾಕಾರದಲ್ಲಿ ಕತ್ತರಿಸಿದ ಕ್ಯಾಪ್ಸಿಕಂ – 1 ಕಪ್
ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ – 1ಕಪ್
ಮೊಸರು – ¾ ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಬ್ಲಾಕ್ ಸಾಲ್ಟ್ – ½ ಟೀಸ್ಪೂನ್
ಕಸೂರಿ ಮೆಥಿ – 1 ಟೀಸ್ಪೂನ್
ಪಿಂಚ್ ಇಂಗ್
ತಂದೂರಿ ಮಸಾಲ – 1 ಟೀಸ್ಪೂನ್ (optional)
ತುರಿದ ಶುಂಠಿ – 1-2 ಟೀಸ್ಪೂನ್
ನಿಂಬೆ ರಸ – 1-2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಮೊಸರು ಸೇರಿಸಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ತಂದೂರಿ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ, ಬ್ಲಾಕ್ ಸಾಲ್ಟ್, ಉಪ್ಪು, ಕಸೂರಿ ಮೆಥಿ, ಪಿಂಚ್ ಹಿಂಗ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.
ನಂತರ ತುರಿದ ಶುಂಠಿ ಮತ್ತು ನಿಂಬೆ ರಸವನ್ನು ಸೇರಿಸಿ. ಪುನಃ ಕಲಸಿ ನಯವಾದ ಪೇಸ್ಟ್ ಮಾಡಿ.
ಮೊಸರು ಮಿಶ್ರಣಕ್ಕೆ ಪನೀರ್ ತುಂಡು, ಕ್ಯಾಪ್ಸಿಕಂ
ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.10 ನಿಮಿಷಗಳ ಕಾಲ ಹಾಗೆಯೇ ಇರಿಸಿ.
ಮ್ಯಾರಿನೇಟ್ ಮಾಡಿದ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿ ತುಂಡುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ, ಅದನ್ನು 20-30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ.
ನಂತರ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಮರದ ಕಡ್ಡಿಯನ್ನು ಓರೆಯಾಗಿ ಚುಚ್ಚಿ.
ಈಗ ಹೆಚ್ಚಿನ ತಾಪಮಾನದಲ್ಲಿ ತಂದೂರಿನಲ್ಲಿ ಅಥವಾ ಒವನ್ ನಲ್ಲಿ ಕಾಯಿಸಿ. ಬೇಕಿಂಗ್ ಶೀಟ್ ತೆಗೆದುಕೊಂಡು ಅದನ್ನು ಅಲ್ಯೂಮಿನಿಯಂ ಫಾಯಿಲ್ ಪೇಪರ್ ಬಳಸಿ ಮುಚ್ಚಿ, ನಂತರ ಅದರ ಮೇಲೆ ತಯಾರಾದ ತುಂಡುಗಳನ್ನು ಜೋಡಿಸಿ, ಎಣ್ಣೆಯನ್ನು ಸಿಂಪಡಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
ನೀವು ಒಲೆಯನ್ನು ಬಳಸುವುದಾದರೆ ಸ್ವಲ್ಪ ಎಣ್ಣೆಯನ್ನು ಬಳಸಿ ಮ್ಯಾರಿನೇಟ್ ಮಾಡಿದ ತುಂಡುಗಳನ್ನು ಗ್ರಿಡ್ಲ್ ಅಥವಾ ತವಾ ಮೇಲೆ ಹುರಿಯಬಹುದು.
ಎಲ್ಲಾ ಬದಿಗಳನ್ನು ಸರಿಯಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು.
ಈಗ ಪನೀರ್ ಟಿಕ್ಕ ಸಿದ್ಧವಾಗಿದೆ. ನೀವು ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ, ನಿಂಬೆ ರಸವನ್ನು ಸಿಂಪಡಿಸಬಹುದು ಮತ್ತು ರುಚಿಯಾದ ಪನೀರ್ ಟಿಕ್ಕಾವನ್ನು ಪುದೀನ ಚಟ್ನಿಯೊಂದಿಗೆ ಸವಿಯಬಹುದು.
Cooking : paneer tikka recipies