ಹಳ್ಳಿಗಳಿಗೆ ಕೊರೊನಾ ಕೊಳ್ಳಿ : ಪೊಲೀಸರಿಂದ ಜಾಗೃತಿ
ಚಿತ್ರದುರ್ಗ : ಕೊರೊನಾ ಸೋಂಕು ಇದೀಗ ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕವಾಗಿ ಹರಡುತ್ತಿದೆ.
ಈ ಹಿನ್ನೆಲೆಯಲ್ಲಿ ಚಳ್ಳಕೆರೆ ಯಲ್ಲಿ ಪೊಲೀಸರು ಹಳ್ಳಿಗಳ ಬೀದಿ ಬೀದಿಯಲ್ಲಿ ಸಂಚರಿಸಿ ಕೊರೊನಾ ಬಗ್ಗೆ ಜಾಗೃತಿ ಮೂಢಿಸಿದರು.
ತಾಲೂಕಿನ ಸಾಣಿಕೆರೆ,ಬೆಳೆಗೆರೆ ಹಾಗೂ ಕಾಪರಹಳ್ಳಿ ಹುಲಿಕುಂಟೆ, ನಾರಾಯಣಪುರ ಯಲಗಟ್ಟೆ ಗ್ರಾಮಗಳಲ್ಲಿ ಪಿಎಸ್ ಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ, ಹಾಗೂ ಪೊಲೀಸರು ಮನೆ ಮನೆಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಕೋರೋನಾ ಬಗ್ಗೆ ಜಾಗೃತಿಯಿಂದ ಇರಬೇಕು.
ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು, ಸಾಮಾಜಿಕ ಅಂತರ , ಮಾಸ್ಕ್ ಇವುಗಳನ್ನು ಪಾಲಿಸಬೇಕು.
ಯಾರೂ ಭಯ ಪಡುವುದು ಬೇಡ, ಆದರೆ ಎಚ್ಚರಿಕೆಯಿಂದ ಇರಬೇಕು. ಜವಾಬ್ದಾರಿಯುತವಾಗಿ ವರ್ತಸುವ ಮೂಲಕ ತಮ್ಮ ಜೀವ ಹಾಗೂ ಕುಟುಂಬಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಜಾಗೃತಿ ಮೂಢಿಸಿದರು.










