ಬಿಸಿಲೂರು ಕಲಬುರಗಿಯಲ್ಲಿ `ಕರಿಮಾರಿ’ಯ ಆತಂಕ
ಕಲಬುರಗಿ : ಅಬ್ಬರಿಸಿ ಬೊಬ್ಬರಿದ ಕೊರೊನಾ ಇದೀಗ ತಣ್ಣಗಾಗುತ್ತಿದೆ ಅನ್ನುವಷ್ಠರಲ್ಲೇ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ ಶುರುವಾಗಿದೆ.
ಇದರಿಂದಾಗಿ ಕೊರೊನಾದಿಂದ ಗುಣಮುಖರಾದವರಲ್ಲಿ ಆತಂಕ ಶುರುವಾಗಿದೆ.
ಜಿಲ್ಲೆಯಲ್ಲಿ ಸದ್ಯ ಕೊರೊನಾ ಅಬ್ಬರ ತಗ್ಗಿದೆ. ಪ್ರತಿದಿನ ಕೇವಲ 100ರ ಒಳಗಡೆ ಹೊಸ ಕೇಸ್ ಗಳು ಬರುತ್ತಿವೆ.
ಕಳೆದೊಂದು ವಾರದ ಡೇಟಾ ನೋಡಿದರೆ, 819 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಂದು ವಾರದಲ್ಲಿ 3714 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಆದ್ರೆ ಹೀಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ವ್ಯಕ್ತಿ ಕಪ್ಪು ಶಿಲೀಂಧ್ರ ಸೋಂಕು ತಗುಲಿ ಮೃತಪಟ್ಟಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಐವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, 104 ಜನರಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಪತ್ತೆಯಾಗಿದೆ.
ಬ್ಲ್ಯಾಕ್ ಫಂಗಸ್ ಲಕ್ಷಣಗಳಿರುವ 12 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಮ್ಸ್ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳಿರುವ 87 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಹೆಚ್ ಒ ಡಾ. ಶರಣಬಸಪ್ಪ ಗಣಜಲಖೇಡ್ ಮಾಹಿತಿ ನೀಡಿದ್ದಾರೆ.