ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ವೈರಸ್ ರುದ್ರ ನರ್ತನ ಮುಂದುವರೆದಿದೆ. ಇಂದು 2 ವರ್ಷದ ಮಗು ಸೇರಿ 34 ಜನರಿಗೆ ಮಹಾಮಾರಿ ಕೊರೊನಾ ಸೊಂಕಿರುವುದು ದೃಡಪಟ್ಟಿದೆ. ಕಳೆದ ಒಂದು ವಾರದಿಂದ ಧಾರವಾಡ ಜಿಲ್ಲೆಗೆ ಹೆಮ್ಮಾರಿ ಕೊರೊನಾ ಬೆಂಬಿಡದೆ ಕಾಡ್ತಿದೆ. ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರಲ್ಲೆ ಅತೀ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ.
ಮಕ್ಕಳು ಮತ್ತು ವೃದ್ಧರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಸಿಟಿವ್ ಬರುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಇಂದು ದೃಢಪಟ್ಟ 34 ಪಾಸಿಟಿವ್ ಕೇಸ್ ಗಳೂ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 155 ಕ್ಕೆ ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಇನ್ನು 155 ಸೋಂಕಿತರ ಪೈಕಿ ಈವರೆಗೂ ಜಿಲ್ಲೆಯಲ್ಲಿ 50 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 102 ಮಂದಿ ಸೋಂಕಿತರಿಗೆ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.








