ಬೆಂಗಳೂರಲ್ಲಿ ಕೊರೊನಾ ಹೆಚ್ಚಳ | ಬಿಬಿಎಂಪಿಯಿಂದ ಹೊಸ ರೂಲ್ಸ್
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಶುರು ಮಾಡಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೋಟೆಲ್ ಮಾಲೀಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಇದಾದ ಬಳಿಕ ಕೊರೊನಾ ನಿಯಂತ್ರಣಕ್ಕೆ ಕೆಲ ಹೊಸದಾದ ನಿಯಮಗಳನ್ನು ಕಡ್ಡಾಯ ಮಾಡಿದ್ದಾರೆ.
ಹೊಸ ನಿಯಮಗಳು
ಹೋಟೆಲ್ ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
ಮಾಸ್ಕ್ ಧರಿಸದ ಗ್ರಾಹಕರಿಗೆ ಹೋಟೆಲ್ ಒಳಗೆ ಪ್ರವೇಶವಿಲ್ಲ
ಹೋಟೆಲ್ ಸಿಬ್ಬಂದಿ ಮಾಸ್ಕ್ ಧರಿಸೋದು ಕಡ್ಡಾಯ
15 ದಿನಕ್ಕೊಮ್ಮೆ ಆರ್ ಟಿಪಿಸಿಆರ್ ಕೊರೊನಾ ಪರೀಕ್ಷೆ ಕಡ್ಡಾಯ
ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಕಡ್ಡಾಯ
ಹೋಟಲ್ ನ ಯಾವುದೇ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ್ರೆ ತಕ್ಷಣ ಆತನನ್ನು ಐಸೋಲೇಟ್ ಮಾಡಬೇಕು
60 ವರ್ಷ ಮೇಲ್ಪಟ್ಟ ಹೋಟೆಲ್ ಸಿಬ್ಬಂದಿ ಕಡ್ಡಾಯ ಕೊರೊನಾ ಲಸಿಕೆ ಪಡೆಯಬೇಕು
ರಸ್ತೆ ಬದಿಯ ಹೋಟೆಲ್ ಗಳ ಮೇಲೆ ಮಾರ್ಷಲ್‍ಗಳ ನಿಗಾ
ಕೊರೊನಾ ನಿಯಮ ಅನುಸರಿಸದಿದ್ರೆ ದಂಡ









