ಕೊರೊನಾ ರಿಪೋರ್ಟ್ : ನಿನ್ನೆ 2,76,070 ಮಂದಿಗೆ ಸೋಂಕು, 3,69,077 ಮಂದಿ ಡಿಸ್ಚಾರ್ಜ್ Corona
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಠಿ ಮಾಡುತ್ತಿದೆ.
ಈ ಮಧ್ಯ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,76,070 ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, 3,874 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ಭಾರತದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,57,72,400ಕ್ಕೆ ಏರಿಕೆಯಾಗಿದೆ.
ಈ ಪೈಕಿ ಇಲ್ಲಿಯವರೆಗೆ 2,23,55,440 ಜನರು ಗುಣಮುಖರಾಗಿದ್ದಾರೆ.
ನಿನ್ನೆ ಒಂದೇ ದಿನ 3,69,077 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಹಾಮಾರಿಯಿಂದ ಒಟ್ಟು 2,87,122 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ದೇಶದಲ್ಲಿನ್ನೂ 31,29,878 ಸಕ್ರಿಯ ಪ್ರಕರಣಗಳಿವೆ.