ಧಾರವಾಡ SDM ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕರೋನಾ
ದಿನಗಳು ಕಳೆದಂತೆ ನಿಧಾನವಾಗಿ ಮಹಾಮಾರಿ ಕರೋನಾ ಮತ್ತೆ ನಿಧಾನವಾಗಿ ಹರಡುತ್ತಿದೆ. ಧಾರವಾಡದ ಸುತ್ತೂರು ಬಡಾವಣೆಯಲ್ಲಿರುವ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ 66 ವಿದ್ಯಾರ್ಥಿಗಳಿಗೆ ಕರೋನಾ ಸೊಂಕು ತಗುಲಿದೆ.
ಈ ಮೊದಲು ನಾಲ್ಕು ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ತಗುಲಿತ್ತು. ಹಾಗಾಗಿ ಕಾಲೇಜಿನ 300 ವಿದ್ಯಾರ್ಥಿಗಳಿಗೆ ಕರೋನಾ ತಪಾಸಣೆ ಮಾಡಲಾಗಿತ್ತು. ಸೋಂಕಿತ ವಿದ್ಯಾರ್ಥಿಗಳಿಗೆ ಕಾಲೇಜಿನ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಈ ಕುರಿತು ಮೆಡಿಕಲ್ ಕಾಲೇಜಿಗೆ ಡಿ ಸಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು ಕಾಲೇಜು ಪ್ರಾಂಶುಪಾಲರಾದ ಡಾ.ರತ್ನಮಾಲಾ ಜತೆ ಚರ್ಚೆ ನಡೆಸಿದ್ದಾರೆ. ನಿನ್ನೆ ಕರ್ನಾಟಕದಲ್ಲಿ 254 ಜನರಿಗೆ ಸೋಂಕು ತಗುಲಿದ್ದು ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 6412ಕ್ಕೆ ಏರಿಕೆಯಾಗಿದೆ.
ಇಂಗ್ಲೀಷ್ ಕಾಲುವೆಯಲ್ಲಿ ಮುಳುಗಿದ ದೋಣಿ – 31 ಸಾವು