Covid-19 Update | ರಾಜ್ಯದಲ್ಲಿ ಇಂದು 21 ಸಾವಿರ ಕೇಸ್ ಪತ್ತೆ covid-19-cases update in karnataka
ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 21 ಸಾವಿರದ ಗಡಿದಾಡಿದೆ.
ನಿನ್ನೆಯಷ್ಟೆ ರಾಜ್ಯದಲ್ಲಿ 14 ಸಾವಿರದ ಗಡಿದಾಟಿದ್ದ ಕೊರೊನಾ ಸೋಂಕಿನ ಸಂಖ್ಯೆ ಇಂದು ಏಕಾಏಕಿ 6 ಸಾವಿರ ಜಿಗಿದು 21 ಸಾವಿರಕ್ಕೆ ಬಂದು ನಿಂತಿದೆ.
ರಾಜ್ಯದಲ್ಲಿ ಇವತ್ತು 21,390 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. 10 ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
1541 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 93009 ಕೇಸ್ ಗಳು ಸಕ್ರಿಯವಾಗಿವೆ.
ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 10.96% ದಾಟಿದೆ.
ಇತ್ತ ಬೆಂಗಳೂರಿನಲ್ಲಿ ಇಂದು 15,617 ಕೇಸ್ ಗಳು ಪತ್ತೆಯಾಗಿವೆ. ಆರು ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ನಗರದಲ್ಲಿ ಸದ್ಯ 73 ಸಾವಿರಕ್ಕೂ ಹೆಚ್ಚು ಸಕ್ರಿಯಕೇಸ್ ಗಳಿವೆ.