COVID 19 UPDATE | ರಾಜ್ಯದಲ್ಲಿ ಇಂದು 28,723 ಕೊರೊನಾ ಕೇಸ್  ಪತ್ತೆ

1 min read
karnataka COVID 19 CASE UPDATE Saaksha tv

COVID 19 UPDATE | ರಾಜ್ಯದಲ್ಲಿ ಇಂದು 28,723 ಕೊರೊನಾ ಕೇಸ್  ಪತ್ತೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಜೋರಾಗಿದೆ.

ರಾಜ್ಯದಲ್ಲಿ ಇಂದು 28,723 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ಎಂಟು ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿಂದು 3,105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೇಸ್ ಗಳ ಸಂಖ್ಯೆ 1,41,337 ಕ್ಕೆ ಬಂದಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 20,121 ಕೊರೊನಾ ಕೇಸ್ ಪತ್ತೆಯಾಗಿವೆ.

COVID 19 UPDATE saaksha tv

ಇಂದು ನಗರದ ದಕ್ಷಿಣ ವಲಯದಲ್ಲಿ ಅತಿ ಕೇಸ್ ಗಳು ಪತ್ತೆಯಾಗಿವೆ. ಇಲ್ಲಿ 3,172 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.

ಬೊಮ್ಮನಹಳ್ಳಿ ವಲಯದಲ್ಲಿ 2,232 , ದಾಸರಹಳ್ಳಿ 493, ಬೆಂಗಳೂರು ಪೂರ್ವ 3,126 , ಮಹದೇವಪುರ 2,343, ಆರ್ ಆರ್‌ನಗರ 1,528,  ಪಶ್ಚಿಮ 2,454,

ಯಲಹಂಕ 1,412, ಅನೇಕಲ್ 921, ಬೆಂಗಳೂರು ಹೊರವಲಯ 1,360 ಸೇರಿ ಒಟ್ಟು 20,121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd