Covid19 : ಚೀನಾದಲ್ಲಿ 10 ಲಕ್ಷ ದೈನಂದಿನ ಪ್ರಕರಣಗಳು , 10 ಸಾವಿರ ಸಾವು – ಎಚ್ಚರಿಕೆ
ಕೊರೊನಾ ಭಯದಿಂದ ಇಡೀ ವಿಶ್ವವೇ ಮುಕ್ತವಾಗಿ ಸಹಜ ಜೀವನಕ್ಕೆ ಮರಳುವ ಹೊತ್ತಲ್ಲೇ ಇದೀಗ ಮತ್ತೊಮ್ಮೆ ಮಹಾಮಾರಿಯ ಆತಂಕ ಚೀನಾ , ಅಮೆರಿ ಕಾ ಸೇರಿದಂತೆ ಹಲವು ದೇಶಗಳಲ್ಲಿ ಹೆಚ್ಚಾಗಿದೆ.. ಇತ್ತ ಚೀನಾದಲ್ಲಿ ಮತ್ತೆ ಪರಿಸ್ಥಿತಿ ,ಕೈ ಮೀರಿ ಹೋಗುತ್ತಿದೆ.. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತಿದ್ದಾರೆ.. ಬೆಡ್ ಗವಳು ಸಿಗದೇ ಪರದಾಡುತ್ತಿದ್ದಾರೆ.. ಲಾಕ್ ಡೌನ್ ಹೇರಲಾಗಿದೆ…
ಇತ್ತ ಪ್ರತಿನಿತ್ಯ 10 ಲಕ್ಷ ಪ್ರಕರಣಗಳು ಮತ್ತು 5,000 ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲಂಡನ್ ಮೂಲದ ವಿಶ್ಲೇಷಣಾ ಸಂಸ್ಥೆಯ ವರದಿ ಹೇಳಿದ್ದು ಮತ್ತೊಮ್ಮೆ ಇಡೀ ವಿಶ್ವಕ್ಕೆ ಚೀನಾ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ..
ಅಲ್ಲಿನ ಅಧ್ಯಕ್ಷ ಷಿ ಜಿನ್ ಪಿಂಗ್ ನೇತೃತ್ವದ ಸರ್ಕಾರವು ಕೋವಿಡ್ -19 ನಿಂದ ಉಂಟಾದ ಸಾವನ್ನು ಲಘುವಾಗಿ ಪರಿಗಣಿಸಿದ್ದು, ಸತ್ತವರ ಸಂಖ್ಯೆಯನ್ನು ಎಣಿಸಲು ಕಷ್ಟಪಡುತ್ತಿದೆ. ಕೊರೊನಾ ವೈರಸ್ ಓಮೈಕ್ರಾನ್ ನ ಉಪತಳಿ ಬಿಎಫ್.7 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮುಂದಿನ ತಿಂಗಳ ಸುಮಾರಿಗೆ ಪ್ರತಿ ದಿನ 37 ಲಕ್ಷಕ್ಕೆ ಏರಿಕೆಯಾಗಲಿದೆ. ಮಾರ್ಚ್ ನಲ್ಲಿ 42 ಲಕ್ಷ ತಲುಪಲಿದೆ ಎಂದು ಏರ್ ಫಿನಿಟಿ ಸಂಸ್ಥೆಯ ಅಧ್ಯಯನ ವರದಿ ಎಚ್ಚರಿಸಿದೆ.
ಇನ್ನೂ ಚೀನಾದ ಅಧಿಕೃತ ಮಾಹಿತಿಯಂತೆ ಬುಧವಾರ 2,966 ಕೋವಿಡ್ ಪ್ರಕರಣಗಳು ದಾಖಲಾಗಿದ್ದು 10 ಸಾವು ಸಂಭವಿಸಿದೆ. ಕಳೆದ ವಾರದಿಂದ ಜಪಾನ್, ಅಮೆರಿಕ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ದಿಢೀರನೇ ಕೋವಿಡ್–19ರ ಪ್ರಕರಣಗಳು ಹೆಚ್ಚಾಗಿದ್ದು, ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಅಮೆರಿಕದಲ್ಲಿ ಇಲ್ಲಿಯವರೆಗೆ 10,00,03,837 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 10,88,236 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ..