Covid 19 ರಿಪೋರ್ಟ್ : ಹೆಚ್ಚಾಯ್ತು ದೈನಂದಿನ ಕೇಸ್ ಗಳ ಸಂಖ್ಯೆ

1 min read

Covid 19 ರಿಪೋರ್ಟ್ : ಹೆಚ್ಚಾಯ್ತು ದೈನಂದಿನ ಕೇಸ್ ಗಳ ಸಂಖ್ಯೆ

ದೇಶದಲ್ಲಿ ಮತ್ತೆ ಕೋವಿಡ್ ಆತಂಕ ಹೆಚ್ಚಾಗ್ತಿದೆ.. ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ… ದೈನಂದಿನ ಕೇಸ್ ಗಳು ಏರಿಕೆಯಾಗ್ತಲೇ ಇರೋದು ಆತಂಕಕ್ಕೆ ಕಾರಣವಾಗಿದೆ..

24 ಗಂಟೆ ಅವಧಿಯಲ್ಲಿ 12,781 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. 18 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 130 ದಿನಗಳ ಬಳಿಕ ದೇಶದಲ್ಲಿ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 4ಕ್ಕಿಂತ ಹೆಚ್ಚಾಗಿದೆ.

ಸದ್ಯ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 4.32ರಷ್ಟಿದ್ದರೆ, ವಾರದ ಪಾಸಿಟಿವಿಟಿ ಪ್ರಮಾಣ ಶೇ 2.63ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 76,700ಕ್ಕೆ ಏರಿಕೆಯಾಗಿದೆ.

ಇದು ಒಟ್ಟಾರೆ ಪ್ರಕರಣಗಳ ಶೇ 0.18 ರಷ್ಟಿದೆ. ಮರಣ ಪ್ರಮಾಣ ಶೇ 1.21 ರಷ್ಟಿದೆ. ಈವರೆಗೆ ದೇಶದಾದ್ಯಂತ 196.18 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd