Covid19 Report : India : ಹೊಸದಾಗಿ 16 , 678 ಕೇಸ್ ಪತ್ತೆ…
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 16, 678 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.. ಇದೇ ಅವಧಿಯಲ್ಲಿ 24 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.. ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1, 30,713 ಕ್ಕೆ ಏರಿಕೆಯಾಗಿದೆ..
ಒಟ್ಟಾರೆ ಈ ವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5,24,454ಕ್ಕೆ ಏರಿಕೆಯಾಗಿದೆ.. ಚೇತರಿಕೆ ದರ ಶೇಕಡ 98.50ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇಕಡ 5.99 ರಷ್ಟಿದ್ದು ವಾರದ ಪಾಸಿಟಿವಿಟಿ ದರ ಶೇಕಡ 4.18 ರಷ್ಟಿದೆ.