ದೇಶದಲ್ಲಿ ಇಂದು ಕೊರೊನಾ ಮಹಾಸ್ಪೋಟ – ತಿಂಗಳುಗಳ ಬಳಿಕ ಮತ್ತೆ 27 ಸಾವಿರ ದಾಟಿದ ದೈನಂದಿನ ಕೇಸ್ ಗಳು – 3ನೇ ಅಲೆ
ದೇಶದಲ್ಲಿ ಮತ್ತೆ ಕೊರೊನಾ ಮಹಾಸ್ಪೋಟವಾಗಿದೆ.. ತಿಂಗಳುಗಳಿಂದ 10 ಸಾವಿರದ ಒಳಗೆ ದಾಖಲಾಗುತ್ತಿದ್ದ ದೈನಂದಿನ ಕೇಸ್ ಗಳಲ್ಲಿ ಇಂದು ಧಿಢೀರ್ ಏರಿಕೆಯಾಗಿದ್ದು , ಕೋವಿಡ್ 3ನೇ ಅಲೆ ಜನರಲ್ಲಿ ಆತಂಕ ಮೂಡಿಸಿದೆ..
ಒಂದೇ ದಿನ 9,249 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು ಕೊಂಚ ಸಮಾಧಾನಕರ ಸಂಗತಿಯಾಗಿದೆ..
284 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮೃತರ ಸಂಖ್ಯೆ 4,81,294ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಒಮಿಕ್ರಾನ್ ಆತಂಕವೂ ಕೂಡ ಹೆಚ್ಚಾಗಿದೆ.. ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 1 , 525 ಕ್ಕೆ ತಲುಪಿದೆ..








