ಕೊರೊನಾವೈರಸ್ ಹರಡಿದ್ದು, ಲ್ಯಾಬ್ ನಿಂದನಾ… ಬಾವಲಿಗಳಿಂದಲಾ…?
ಜಿನಿವಾ: ಕೊರೊನಾ ವೈರಸ್ ಚೀನಾದಿಂದ ಹಬ್ಬಿ ಇಡೀ ವಿಶ್ವದಾದ್ಯಂತ ಅಬ್ಬರಿಸಿ ಎಷ್ಟೋ ಜನರ ಜೀವ ತೆಗೆದಿದೆ. ಜನರ ಬದುಕನ್ನ ಮೂರಾಬಟ್ಟೆ ಮಾಡಿದೆ. ಅನೇಕ ದೇಶಗಳು ಈಗಲೂ ಆರ್ಥಿಕ ಸಂಕಷ್ಟಗಳನ್ನ ಎದುರಿಸುತ್ತಿವೆ. ಆದ್ರೆ ಈ ವರೆಗೂ ಕೊರೊನಾವೈರಸ್ ಹರಡಿದ್ದು ಹೇಗೆ ಎಂಬ ಪ್ರಶ್ನೆಗೆ ಸರಿಯಾದ ಸಮಂಜಸ ಉತ್ತರ ಸಿಕ್ಕಿಲ್ಲ.
ಇದೀಗ ಕೊರೋನಾವೈರಸ್ ಸೋಂಕು ಬಾವಲಿಗಳಿಂದ ಬೇರೊಂದು ಪ್ರಾಣಿಯ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದೆ. ಬಹುತೇಕ ಬಾವಲಿಗಳಿಂದಲೇ ಕೊರೊನಾ ವೈರಸ್ ಹರಡಿರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ಜಂಟಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಇನ್ನೂ ಪ್ರಯೋಗಾಲಯದಿಂದ ಈ ವೈರಾಣು ಸೋರಿಕೆ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಪ್ರಯೋಗಾಲಯದಿಂದ ವೈರಾಣು ಸೋರಿಕೆಯಾಗಿರುವ ಸಾಧ್ಯತೆಯನ್ನು ಹೊರತುಪಡಿಸಿ ಬೇರೆ ಎಲ್ಲಾ ಆಯಾಮಗಳಿಂದಲೂ ಚ್ಚಿನ ಸಂಶೋಧನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಿರ್ಧರಿಸಿರೋದಾಗಿ ತಿಳಿದುಬಂದಿದೆ.
ನ್ಯಾಶ್ ವಿಲ್ಲೆಯ ಟೆನ್ನೆಸ್ಸಿಯಲ್ಲಿ ಭೀಕರ ಪ್ರವಾಹ…ನಾಲ್ವರು ಸಾವು..!
ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನ…5 ಮಂದಿ ಸಾವು
ಟ್ವಿಟ್ಟರ್ ಬಳಕೆದಾರರಿಗೆ ಗುಡ್ ನ್ಯೂಸ್ – ಮತ್ತೊಂದು ಕೂಲ್ ಫೀಚರ್ ನಿಮಗಾಗಿ…!
ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!