ಇತ್ತೀಚೆಗೆ ನಡೆದ ಅಪರಾಧ ಸುದ್ದಿಗಳು : LATEST NEWS

1 min read

ಇತ್ತೀಚೆಗೆ ನಡೆದ ಅಪರಾಧ ಸುದ್ದಿಗಳು : LATEST NEWS

ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!

ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!

ನೈಜೀರಿಯಾ: ಪಶ್ಚಿಮ ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ವಸತಿಶಾಲೆಗೆ ನುಗ್ಗಿದ್ದ ಬಂಧೂಕುಧಾರಿಗಳು 300ಕ್ಕೂ ಹೆಚ್ಚು ಬಾಲಕಿಯರನ್ನು ಅಪಹರಿಸಿದ್ದಾರೆ. ಸದ್ಯ ಪ್ರಕರಣ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸಿದೆ. ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ನೈಜೀರಿಯಾದ ಝಾಂಫರಾ ರಾಜ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಾಲೆಯ ಹಾಸ್ಟೆಲ್​ಗೆ ನುಗ್ಗಿದ ಶಸ್ತ್ರಸಜ್ಜಿತ ಕಿಡ್ನಾಪರ್​​ಗಳು ಸುಮಾರು 300ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿದ್ದಾರೆ.

ಇದ್ಯಾವ ನ್ಯಾಯ ಸ್ವಾಮಿ… ಒಬ್ಬ ಮಗಳ ಜೀವ ಉಳಿಸಲು ಮತ್ತೊಬ್ಬಳನ್ನ ಮಾರಿದ ಪೋಷಕರು..!  

ಇದ್ಯಾವ ನ್ಯಾಯ ಸ್ವಾಮಿ… ಒಬ್ಬ ಮಗಳ ಜೀವ ಉಳಿಸಲು ಮತ್ತೊಬ್ಬಳನ್ನ ಮಾರಿದ ಪೋಷಕರು..!

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಂದೆ ತಾಯಿ ತನ್ನ ಒಬ್ಬ ಮಗಳನ್ನ ಉಳಿಸುವುದಕ್ಕಾಗಿ ಮತ್ತೊಬ್ಬ ಮಗಳನ್ನ ಕೇವಲ 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಲ್ಲದೇ ಮಾರಾಟವಾದ 12 ವರ್ಷದ ಬಾಲಕಿಯ ಬಲವಂತವಾದ ವಿವಾಹವೂ ಆಗಿದೆ ಎನ್ನಲಾಗಿದೆ.

ದಂಪತಿಯೊಂದು ತಮ್ಮ 16 ವರ್ಷದ ದೊಡ್ಡ ಮಗಳು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆ ಆಕೆಯ  ಚಿಕಿತ್ಸೆಗಾಗಿ ತಮ್ಮ ಚಿಕ್ಕ ಮಗಳನ್ನು (12 ವರ್ಷದ ಬಾಲಕಿ) ಮಾರಾಟ ಮಾಡಿದ್ದಾರೆ. ಅದೂ ಕೂಡ ಕೇವಲ 10 ಸಾವಿರ ರೂಪಾಯಿಗೆ. ಈ ದಂಪತಿಯ ಮೊದಲ ಮಗಳನ್ನ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಡುವಂತೆ 46 ವರ್ಷದ ಚಿನ್ನ ಸುಬ್ಬಯ್ಯ ಎಂಬಾತ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಈತ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದ. ಆದರೆ ಬಾಲಕಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು. ಆದ್ರೆ ಇತ್ತೀಚೆಗೆ ಪುತ್ರಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಪೋಷಕರು ಚಿಕಿತ್ಸೆಗಾಗಿ ಸುಬ್ಬಯ್ಯನಿಂದ ಹಣ ಪಡೆದು ಚಿಕ್ಕ ಮಗಳನ್ನಮಾರಾಟ ಮಾಡಿದ್ದಾರೆ.

ಪ್ರಿಯಕರನ ಜೊತೆ ಜಗಳ: ಮಾಡಿಕೊಂಡು ನೀರಿನ ಟ್ಯಾಂಕ್ ಮೇಲಿಂದ ಹಾರಿದ ಯುವತಿ

ಪ್ರಿಯಕರನ ಜೊತೆ ಜಗಳ: ಮಾಡಿಕೊಂಡು ನೀರಿನ ಟ್ಯಾಂಕ್ ಮೇಲಿಂದ ಹಾರಿದ ಯುವತಿ

ಉತ್ತರ ಪ್ರದೇಶ: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆಗೆ ಜಗಳವಾಡಿ ನೀರಿನ ಟ್ಯಾಂಕ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರನಗರದ ಮಂಡಿ ಕೋತ್ವಾಲಿ ಕ್ಷೇತ್ರದ ಗಾಂಧಿನಗರದಲ್ಲಿ ನಡೆದಿದೆ. ತನ್ನ ಬಾಯ್ ಫ್ರೆಂಡ್ ಜೊತೆಗೆ ಜಗಳ ಮಾಡಿಕೊಂಡಿದ್ದ ಯುವತಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಏರಿದ್ದಳು. ಕುಟುಂಬಸ್ಥರು ಮತ್ತು ಸ್ಥಳೀಯರು ಕೆಳಗೆ ಇಳಿಯುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೂ ಯುವತಿ ತಾನು ಸಾಯೋದಾಗಿ ಜೋರು ಜೋರಾಗಿ ಕೂಗಿ ಹೇಳಿದ್ದಾಳೆ. ಹಿಂದಿನಿಂದ ಓರ್ವ ಮೆಟ್ಟಿಲು ಏರಿ ಯುವತಿಯನ್ನ ರಕ್ಷಿಸಲು ಮುಂದಾಗಿದ್ದಾನೆ. ವ್ಯಕ್ತಿ ತನ್ನ ಬಳಿ ಬರೋದನ್ನ ನೋಡಿದ ಯುವತಿ ವಾಟರ್ ಟ್ಯಾಂಕ್ ಮೇಲ್ಭಾಗದಿಂದ ಕೆಳಗೆ ಜಿಗಿದಿದ್ದಾಳೆ. ಕೂಡಲೇ ಪೋಷಕರು ಯುವತಿಯನ್ನ ಆಸ್ಪತೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇನ್ನೂ ಆಕೆ ನೀರಿನ ಟ್ಯಾಂಕ್ ನಿಂದ ಜಿಗಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ.

ಕಾರವಾರ | ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರು ಗಂಭೀರ

ಕಾರವಾರ | ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರು ಗಂಭೀರ

ಕಾರವಾರ : ಬೈಕ್ ಗಳ ನಡುವೆ ಡಿಕ್ಕಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟಾದ ಕತಗಾಲ ಬಳಿ ನಡೆದಿದೆ. ಘಟನೆಯಲ್ಲಿ ಶಶಾಂಕ್ ಅಂಬಿಗ, ದಿನೇಶ ಪಟಗಾರ ಎಂಬುವವರು ಗಂಭೀತವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅವರನ್ನ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕತ್ಸೆ ಮುಂದುವರಿದಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಶಿರಸಿಯಿಂದ ಬರುತ್ತಿದ್ದ ಬೈಕ್ ಹಾಗೂ ಎದುರಿಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಿಡ್ನಾಪ್ ಮತ್ತು ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ : ಆತ್ಮಹತ್ಯೆಗೆ ಶರಣು..!

ಕಿಡ್ನಾಪ್ ಮತ್ತು ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ : ಆತ್ಮಹತ್ಯೆಗೆ ಶರಣು..!

ಹೈದ್ರಾಬಾದ್: ತೆಲಂಗಾಣದ ಹೈದ್ರಾಬಾದ್ ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ ತಿರುವು ಸಿಕ್ಕಿದೆ. ಹೌದು ಈ ಪ್ರಕರಣದಲ್ಲಿ ಯುವತಿಯ ಅಪಹರಣ ಆಗಿಲ್ಲ. ಅತ್ಯಾಚಾರಕ್ಕೆ ಪ್ರಯತ್ನವೂ ನಡೆದಿಲ್ಲ ಬದಲಾಗಿ ವಿದ್ಯಾರ್ಥಿನಿಯ ಕಟ್ಟಿರಿವ ಕಟ್ಟು ಕಥೆ ಎಂಬುದು ಸಾಬೀತಾಗಿದೆ.

ಆದರೆ ವಿದ್ಯಾರ್ಥಿನಿ ಸುಳ್ಳು ಹೇಳಿದ್ದ ವಿಚಾರ ಪೊಲೀಸರಿಗೆ ಗೊತ್ತಾಗ್ತಿದ್ದಂತೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದ್ರಾಬಾದ್ ಘಾಟ್ಕೇಸರ್ ಸಮೀಪದ ನಾಗಾರಾಮ್ ಗ್ರಾಮದಲ್ಲಿ 19 ವರ್ಷದ ಫಾರ್ಮಸಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಯತ್ನ ಮಾಡಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಈ ಸಂಬಂಧ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಸಿಗ್ನಲ್ ಆಧರಿಸಿ ತನಿಖೆ ನಡೆಸಿದಾಗ ಯುವತಿ ಹೇಳಿದ್ದು ಕಟ್ಟು ಕಥೆ ಎಂದು ಬಯಲಾಗಿದೆ. ಆದ್ರೆ ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಯುವತಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ರೆ ಈ ಯುವತಿ ಯಾಕೆ ಈ ರೀತಿ ಮಾಡಿದಳು ಎನ್ನುವುದಕ್ಕೆ ನಿಖರ ಕಾರಣ ತಿಳಿದುಬರಬೇಕಾಗಿದೆ.

ಬಾಯ್ ಫ್ರೆಂಡ್ ಸಾವಿನಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು..!

ಬಾಯ್ ಫ್ರೆಂಡ್ ಸಾವಿನಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು..!

ಜಾರ್ಖಂಡ್: 15 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಸಾವನಪ್ಪಿದ ನೋವಲ್ಲಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್‍ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವುದನ್ನು ಕೇಳಿ ಬಾಲಕಿ ಆಘಾತಕ್ಕೆ ಒಳಗಾಗಿದ್ದಳು.  ಹೀಗೆ ಆತ ಮೃತಪಟ್ಟ ಕೇವಲ 2 ದಿನಗಳ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd