ಬಾಯ್ ಫ್ರೆಂಡ್ ಸಾವಿನಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು..!

1 min read

ಬಾಯ್ ಫ್ರೆಂಡ್ ಸಾವಿನಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು..!

ಜಾರ್ಖಂಡ್: 15 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಸಾವನಪ್ಪಿದ ನೋವಲ್ಲಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್‍ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವುದನ್ನು ಕೇಳಿ ಬಾಲಕಿ ಆಘಾತಕ್ಕೆ ಒಳಗಾಗಿದ್ದಳು.  ಹೀಗೆ ಆತ ಮೃತಪಟ್ಟ ಕೇವಲ 2 ದಿನಗಳ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಹುಕೋಟಿ ಬ್ಯಾಂಕ್ ಹಗರಣದ ಆರೋಪಿ  ನೀರವ್ ಮೋದಿ : ಬ್ರಿಟನ್ ಕೋರ್ಟ್ ಆದೇಶ..!

ಪೋಷಕರಿಲ್ಲದ ವೇಳೆ ರಾತ್ರಿಯಲ್ಲಿ ಬಾಲಕಿ ಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ದೇಹ ಕಂಡ ಗ್ರಾಮಸ್ಥರು ಆಕೆಯ ಕುಟುಂಬಸ್ಥರಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಪ್ರಿಯಕರನ ಸಾವಿನ ಸುದ್ದಿಯಿಂದ ಬೇಸತ್ತು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ಭಿಕ್ಷೆಗಾಗಿ ಬರುತ್ತೆ : ಲಕ್ಷಗಟ್ಟಲೆ ದೋಚುತ್ತೆ ಈ ಖತರ್ನಾಕ್ ಬಿಹಾರಿ ಲೇಡಿ ಗ್ಯಾಂಗ್..!

ಇನ್ನೂ ಬಾಲಕಿಯ ತಂದೆ ಪ್ರೀತಿಗೆ ನಿರಾಕರಿಸಿದ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತನ ತಂದೆ ತಾಯಿ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ ಬಾಲಕಿಯನ್ನು ಪ್ರೀತಿಸುತ್ತಿದ್ದರಿಂದ ಈ ಹಿಂದೆ ನನ್ನ ಮಗನಿಗೆ ಬಾಲಕಿ ತಂದೆ ಜೀವ ಬೆದರಿಕೆ ಕೂಡ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಬಿಜೆಪಿ ಜನವಿರೋಧಿ ನೀತಿಯ ವಿರುದ್ಧ ಹೋರಾಟ : ಶರತ್ ಬಚ್ಚೇಗೌಡ

ಮಂತ್ರಿ ಮಾಲ್ ಗೆ ಬೀಗ ಹಾಕಿದ ಬಿಬಿಎಂಪಿ..! ಕಾರಣ ಏನ್ ಗೊತ್ತಾ…?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd