ಬಹುಕೋಟಿ ಬ್ಯಾಂಕ್ ಹಗರಣದ ಆರೋಪಿ ನೀರವ್ ಮೋದಿ : ಬ್ರಿಟನ್ ಕೋರ್ಟ್ ಆದೇಶ..!
ಬ್ರಿಟನ್ : 14 ಸಾವಿರ ಕೋಟಿ ರೂಪಾಯಿಗಳ ಪಂಜಾಬ್ ನ್ಯಾಷಿನಲ್ ಬ್ಯಾಂಕ್ ಹಗರಣದಲ್ಲಿ ವಂಚಿಸಿ ಭಾರತದಿಂದ ಪರಾರಿಯಾಗಿದ್ದ ಆರೋಪಿ ವಜ್ರ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದೆಂದು ಇಂಗ್ಲೆಂಡ್ ನ್ಯಾಯಾಲಯವು ಆದೇಶ ನೀಡಿದೆ. ನೀರವ್ ಮೋದಿಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ನ್ಯಾಯಾಲಯ ಹೇಳಿದೆ. ಈ ಹಿನ್ನಲೆಯಲ್ಲಿ ವಿಚಾರಣೆಗೆ ನಿಲ್ಲಲು ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಇಂಗ್ಲೆಂಡ್ ಗಡಿಪಾರು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಭಿಕ್ಷೆಗಾಗಿ ಬರುತ್ತೆ : ಲಕ್ಷಗಟ್ಟಲೆ ದೋಚುತ್ತೆ ಈ ಖತರ್ನಾಕ್ ಬಿಹಾರಿ ಲೇಡಿ ಗ್ಯಾಂಗ್..!
ಪಿಎನ್ ಬಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನೀರವ್ ಮೋದಿ ಸಾಕ್ಷ್ಯನಾಶ ಮತ್ತು ಸಾಕ್ಷಿಗಳನ್ನು ಬೆದರಿಸಲು ಸಂಚು ರೂಪಿಸಿದ್ದಾಗಿ UK ಕೋರ್ಟ್ ತೀರ್ಪು ನೀಡಿದೆ. ಲಂಡನ್ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಸಿ ಅವರು ಭಾರತ ಸರ್ಕಾರದ ಅರ್ಜಿಗಳನ್ನ ಒಪ್ಪಿಕೊಂಡಿದ್ದು, ಗಡಿಪಾರು ಆದೇಶವನ್ನ ಹೊರಡಿಸಿದ್ದಾರೆ. ಲಂಡನ್ ಜೈಲಿಗಿಂತ ಮಹಾರಾಷ್ಟ್ರದ ಅರ್ಥರ್ ಜೈಲು ಚನ್ನಾಗಿದೆ ನೀರವ್ ಮೋದಿ ಅಲ್ಲಿಯೇ ಚಿಕಿತ್ಸೆ ಪಡೆಯಬೋದು ಎಂದಿದ್ದಾರೆ.