Crime News : ಪತಿ ಕುಡಿತದ ಚಟಕ್ಕೆ ಬೇಸತ್ತು , ಕೊಲೆ ಮಾಡಿದಳು…
ಪುಣೆ : ಕುಡಿತದ ಚಟಕ್ಕೆ ಬಿದ್ದಿದ್ದ ಗಂಡನ ಕಿರುಕುಳದಿಂದ ಬೇಸತ್ತಿದ್ದ ಪತ್ನಿ ತನ್ನ ಸೋದರಮಾವನ ಸಹಾಯದಿಂದ ಆತನನ್ನ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ..
ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.
ಇನ್ನೂ ಮೃತನನ್ನ 37 ವರ್ಷದ ಕಪ್ತಾನ್ ಸಿಂಗ್ ನಾಯಕ್ ಎಂದು ಗುರುತಿಸಲಾಗಿದೆ. 32 ವರ್ಷದ ಅಂಜಲಿ ಚವ್ಹಾಣ್ ನಾಯಕ್ ಮತ್ತು 36 ವರ್ಷದ ಗಜೇಂದ್ರ ಚಿತ್ತಾರಸಿಂಗ್ ನಾಯಕ್ ಆರೋಪಿಗಳು..
ಸದ್ಯ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಪ್ತಾನ್‍ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್ ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕಪ್ತಾನ್‍ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದ.. ಆದ್ರೀತ ಕುಡಿತದ ಚಟಕ್ಕೆ ಬಿದ್ದು , ಪ್ರತಿನಿತ್ಯ ಪತ್ನಿ ಅಂಜಲಿಗೆ ಕಿರುಕುಳ ನೀಡುವುದು ಹಲ್ಲೆ ಮಾಡುವುದನ್ನ ಖಾಯಂ ಮಾಡಿಕೊಂಡಿದ್ದ.. ಪತಿಯ ಕಿರುಕುಳದಿಂದ ಬೇಸತ್ತ ಅಂಜಲಿ ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ನಂತರ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್ ನನ್ನು ಹೊಡೆದು ಕೊಂದಿದ್ದಾರೆ.
ಸದ್ಯ ಮುಂಡ್ವಾ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ..
crime news : wife kills alchoholic addict husbad