ತಾಯಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದವನಿಂದ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ
ಪಂಜಾಬ್ : ತಾಯಿಯ ಜೊತೆಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಆಕೆಯ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ಧಾನೆ. ಯಾರೂ ಇಲ್ಲದ ಸಮಯ ನೋಡಿಕೊಂಡು ವಗಳು ಒಂಟಿಯಾಗಿ ಸಿಕ್ಕಾಗೆಲ್ಲಾ ಆಕೆಯ ಮೇಲೆ ಕಾಮುಕ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ತೆಯ ತಾಯಿ ಪೊಒಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮಹಿಳೆಯೊಬ್ಬಳು ತನ್ನ ಗಂಡನಿಂದ 4 ವರ್ಷಗಳ ಹಿಂದೆ ಬೇರ್ಪಟ್ಟು ಅಪ್ರಾಪ್ತ ಮಗಳ ಜೊತೆಗೆ ಸಾಂಗ್ರೂರಿನಲ್ಲಿ ಪ್ರತ್ಯೇಕವಾಗಿದ್ದುಕೊಂಡು ಜೀವನ ಸಾಗಿಸುತ್ತಿದ್ದಳು. ಕೆಲ ವರ್ಷಗಳ ಹಿಂದೆ ಆಕೆಗೆ 27 ವರ್ಷದ ವ್ಯಕ್ತಿಯ ಪರಿಚಯವಾಗಿತ್ತು. ಇಬ್ಬರು ಆಗಿನಿಂದ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. ಆದ್ರೆ ಕಾಮುಕ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಯಾರಿಗೂ ಹೇಳದಂತೆ ಧಮ್ಕಿ ಹಾಕಿದ್ದಾನೆ. ಆದ್ರೆ ಬಾಲಕಿಯು ಮನನೊಂದು ತನ್ನ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ.
ಬಳಿಕ ಆಕೆಯ ತಾಯಿ ಆರೋಪಿಯ ಬಳಿ ಇದನ್ನೆಲ್ಲಾ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾಳೆ. ಆದ್ರೆ ಆಗ ಆತನ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಈ ಸಂಬಂಧ ಮಹಿಳೆ ಪೊಲೀಸ್ ಲೂಧಿಯಾನಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.








