ಉತ್ತರಪ್ರದೇಶ : ಅಪ್ರಾಪ್ತ ಬಾಲಕಿ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ..!
ಉತ್ತರಪ್ರದೇಶ : ಅಪರಾಧಗಳ ಆಗರವಾಗಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಕಟ್ಟಿಗೆ ತರಲು ಹೋಗುತ್ತಿದ್ದ ಅಪ್ರಾಪ್ತ ಹುಡುಗಿಯನ್ನ 15 ವರ್ಷದ ಅಪ್ರಾಪ್ತ ಹುಡುಗ ಎಳೆದೊಯ್ದು ಅತ್ಯಾಚಾರವೆಸಗಿದ ಆಘಾತಕಾರಿ ಘಟನೆಯೊಂದು ಶಹಜಾನ್ ಪುರದಲ್ಲಿ ನಡೆದಿದೆ.
ಅತ್ಯಾಚಾರವೆಸಗಿದ ಆರೋಪದಡಿ ಅಪ್ರಾಪ್ತನನ್ನ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಬಾಲಕನ ವಿಚಾರಣೆ ಮುಮದುವರೆಸಿದ್ದಾರೆ. ಸಂತ್ರಸ್ತೆ ಕಟ್ಟಿಗೆ ತರಲು ಹೋಗುತ್ತಿದ್ದಾಗ ಹುಡುಗ ಆಕೆಯನ್ನು ಚರಂಡಿಯ ಬಳಿ ಎಳೆದೊಯ್ದು ಮಾನಭಂಗ ಎಸಗಿದ್ದಾನೆ. ಹುಡುಗಿ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹುಡುಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.