ಈಕ್ವೆಡಾರ್: ಈಕ್ವೆಡರ್ ದೇಶದ ಬ್ಯೂಟಿ (Ecuador Beauty) ಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
2022ರಲ್ಲಿ ʻಮಿಸ್ ಈಕ್ವೆಡರ್ʼ ಕಿರೀಟ ಧರಿಸಿದ್ದ ಬ್ಯೂಟಿ ಲ್ಯಾಂಡಿ ಪರಾಗ ಗೊಯ್ಬುರೊ (23) (Landy Parraga Goyburo) ಏಪ್ರಿಲ್ 28ರಂದು ಭೀಕರ ಗುಂಡಿನ ದಾಳಿಗೆ ತುತ್ತಾಗಿದ್ದರು. ಈಕ್ವೆಡರ್ ದೇಶದ ಕ್ವೆವೆಡೊ ನಗರದಲ್ಲಿ ಇರುವ ಜನಪ್ರಿಯ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
2022ರಲ್ಲಿ ʻಮಿಸ್ ಈಕ್ವೆಡರ್ʼ ಕಿರೀಟ ಧರಿಸಿದ್ದ ಬ್ಯೂಟಿ ಲ್ಯಾಂಡಿ ಪರಾಗ ಗೊಯ್ಬುರೊ (23) (Landy Parraga Goyburo) ಅವರು ಕಳೆದ ಏಪ್ರಿಲ್ 28ರಂದು ಭೀಕರ ಗುಂಡಿನ ದಾಳಿಗೆ ತುತ್ತಾಗಿದ್ದರು. 23 ವರ್ಷ ವಯಸ್ಸಿನ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಮಾಹಿತಿಯೇ ಹಂತಕರಿಗೆ ಸುಳಿವು ನೀಡಿತ್ತು ಎಂಬುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇಬ್ಬರು ಬಂದೂಕುಧಾರಿ ಯುವಕರು ಹೋಟೆಲ್‌ಗೆ ನುಗ್ಗಿ ಆಕೆಯ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ರಭಾವಿಯಾಗಿದ್ದ (Ecuadorian influencer) ಲ್ಯಾಂಡಿ ಪರಾಗ ಎಲ್ಲಿಯೇ ಹೋದರೂ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ ಮಾಡುತ್ತಿದ್ದರು. ಈ ರೆಸ್ಟೋರೆಂಟ್‌ನಲ್ಲಿ ಇರೋದಾಗಿ ಫೋಟೋ ಸಮೇತ ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್ ಮಾಡಿದ್ದರು. ಇದನ್ನು ಕಂಡು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯದ ಮಾಹಿತಿಯಂತೆ ಲ್ಯಾಂಡಿ ಪರಾಗ ಅವರಿಗೆ ಲಿಯಾಂಡ್ರೊ ನೊರೆರೊ ಎಂಬಾತನ ಜೊತೆಗೆ ಗೆಳೆತನ ಇತ್ತು. ಆತ ಓರ್ವ ಮಾದಕ ದ್ರವ್ಯ ಸಾಗಾಟಗಾರನಾಗಿದ್ದ. ಕಳೆದ ವರ್ಷ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಅಲ್ಲಿ ನಡೆದ ಹೊಡೆದಾಟದಲ್ಲಿ ಸಾವನ್ನಪ್ಪಿದ್ದ. ಪತ್ನಿ ಲ್ಯಾಂಡಿ ಅವರ ಹತ್ಯೆಗೆ ಸುಪಾರಿ ಕೊಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.