ನವಜಾತ ಗಂಡು ಮಗು ಕಳೆದುಕೊಂಡ ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ

1 min read

ನವಜಾತ ಗಂಡು ಮಗು ಕಳೆದುಕೊಂಡ ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ

ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊಗೆ  ಅನಿರೀಕ್ಷಿತ ಆಘಾತ  ಉಂಟಾಗಿದೆ.  ಆಗಷ್ಟೆ ಹುಟ್ಟಿದ್ದ ನವಜಾತ ಗಂಡುಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಫುಟ್ ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಸಾಮಾಜಿಕ ಜಾಲತಾಣದಲ್ಲಿ  ತಮ್ಮ ದುಃಖವನ್ನ ಹಂಚಿಕೊಂಡಿದ್ದಾರೆ. ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು ಸಾನವನ್ನಪ್ಪಿದ್ದು ಹೆಣ್ಣು ಮಗು ಬದುಕುಳಿದಿದೆ ಎಂದು ಪೋಸ್ಟ್ ಮಾಡಿ ತಿಳಿಸಿದ್ದಾರೆ.

ರೊನಾಲ್ಡೊ ತಮ್ಮ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರ ಜೊತೆ ಅವಳಿ ಮಕ್ಕಳ ಜನನದ ನಿರೀಕ್ಷೆಯಲ್ಲಿದ್ದರು. ಕಳೆದ ಅಕ್ಟೋಬರ್ ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಆದರೆ ವಿಧಿಯಾಟದಿಂದ ನವಜಾತ ಗಂಡು ಮಗು ಸಾವನ್ನಪ್ಪಿದೆ.

“ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ನಾವು ಹೇಳಬೇಕಾಗಿದೆ. ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ಹೆಣ್ಣು ಮಗುವಿನ ಜನನ ಈ ಕ್ಷಣ ನಮಗೆ ಸ್ವಲ್ಪ ಬದುಕುವ ಶಕ್ತಿ, ಭರವಸೆ ಮತ್ತು ಸಂತೋಷ ನೀಡಿದೆ.  ವೈದ್ಯರು ಮತ್ತು ದಾದಿಯರಿಗೆ ಅವರ ಎಲ್ಲಾ ತಜ್ಞರ ಆರೈಕೆ ಮತ್ತು ಬೆಂಬಲಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವೆಲ್ಲರೂ ಕುಗ್ಗಿಹೋಗಿದ್ದೇವೆ. ಮತ್ತು ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ಬಯಸುತ್ತೇವೆ. ಮಗುವೇ, ನೀನು ನಮ್ಮ ದೇವತೆ. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೈಡ್ ಸೇರಿದಂತೆ ಹಲವರು ರೊನಾಲ್ಡೊ ದುಃಖವನ್ನ ಹಂಚಿಕೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd