ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

CWC 2023: ಸೆಮೀಸ್‌ನಲ್ಲಿ ಇಂಡೋ v ಪಾಕ್‌ ಕದನ ನಿರೀಕ್ಷೆ: ಹೀಗಿದೆ ಅಂಕಪಟ್ಟಿ ಲೆಕ್ಕಾಚಾರ

C Dinesh by C Dinesh
November 6, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
India v Pakistan

India v Pakistan

Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್‌-2023 ಟೂರ್ನಿಯ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಸೆಮಿಫೈನಲ್‌ನಲ್ಲಿ ಯಾವೆಲ್ಲಾ ತಂಡಗಳು ಮುಖಾಮುಖಿ ಆಗಲಿವೆ ಎಂಬ ಲೆಕ್ಕಾಚಾರ ಶುರುವಾಗಿದೆ. ಈ ನಡುವೆ ವಿಶ್ವ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ v ಪಾಕಿಸ್ತಾನ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಕೂಡ ಎದುರಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಸೋಲನ್ನೇ ಕಾಣದೆ ಅಜೇಯ ತಂಡವಾಗಿ ಮುನ್ನಡೆಯುತ್ತಿರುವ ಭಾರತ, ಸೌತ್‌ ಆಫ್ರಿಕಾ ವಿರುದ್ಧ ದೊರೆತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ನಂ.1 ತಂಡವಾಗಿ ಸೆಮೀಸ್‌ ಪ್ರವೇಶಿಸಿದ್ದರೆ. ಸೌತ್‌ ಆಫ್ರಿಕಾ(12 ಅಂಕ, 8 ಪಂದ್ಯ) ಕೂಡ ಈಗಾಗಲೇ ಸೆಮಿಫೈನಲ್‌ ಸ್ಥಾನವನ್ನ ಖಚಿತಪಡಿಸಿಕೊಂಡಿದೆ. ಈ ನಡುವೆ ಆಸ್ಟ್ರೇಲಿಯಾ(10 ಅಂಕ, 7 ಪಂದ್ಯ) ಎರಡು ಅಥವಾ ಮೂರನೇ ಸ್ಥಾನದೊಂದಿಗೆ ಸೆಮೀಸ್‌ ಪ್ರವೇಶ ಪಡೆಯುವ ಅವಕಾಶ ಹೊಂದಿದೆ. ಸೆಮೀಸ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ಇನ್ನೂ 2 ಪಂದ್ಯವನ್ನ ಆಡುವ ಅವಕಾಶ ಹೊಂದಿದೆ. ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸೀಸ್‌, ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನ ಎದುರಿಸಲಿದೆ. ಈ ಪಂದ್ಯಗಳಲ್ಲಿನ ಗೆಲುವು ಆಸ್ಟ್ರೇಲಿಯಾ ತಂಡಕ್ಕೆ ಲೀಗ್‌ ಹಂತದಲ್ಲಿ ಟಾಪ್‌-3 ಸ್ಥಾನವನ್ನ ಖಚಿತಪಡಿಸಲಿದೆ.

ಆದರೆ ಸೆಮಿಫೈನಲ್‌ನ 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದಕ್ಕಾಗಿ ನ್ಯೂಜಿ಼ಲೆಂಡ್‌, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಪ್ರಬಲ ಸ್ಪರ್ಧೆ ಇದೆ. ಉಳಿದಂತೆ 4ನೇ ಸ್ಥಾನಕ್ಕೇರಲು ಶ್ರೀಲಂಕಾ, ನೆದರ್ಲೆಂಡ್ಸ್‌ ತಂಡಗಳು ಕಸರತ್ತು ನಡೆಸುತ್ತಿದ್ದರೂ, ಲೆಕ್ಕಾಚಾರಗಳ ಪ್ರಕಾರ ಇದು ಅಸಾಧ್ಯ ಎನ್ನಲಾಗಿದೆ. ಆದರೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೇರುವ ತಂಡ ಸೆಮೀಸ್‌ನಲ್ಲಿ ಭಾರತವನ್ನ ಮುಖಾಮುಖಿ ಆಗಲಿದೆ. ಹೀಗಾಗಿ ಪಾಕಿಸ್ತಾನ 4ನೇ ಸ್ಥಾನಕ್ಕೆ ಕಸರತ್ತು ನಡೆಸುತ್ತಿರುವುದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶ್ವಕಪ್‌ ಕದನದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕಾಗಿ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳು ಕೂಡ ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

New Zealand

ಪಾಕಿಸ್ತಾನದ ಸೆಮೀಸ್‌ ಅವಕಾಶ:
ಸಾಧ್ಯತೆ 1:
ವಿಶ್ವಕಪ್‌ನ ಸೆಮೀಸ್‌ ರೇಸ್‌ನಲ್ಲಿರುವ ಪಾಕಿಸ್ತಾನ, ನ.11ರಂದು ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನ ಎದುರಿಸಲಿದೆ. ಈ ನಡುವೆ ನ್ಯೂಜಿ಼ಲೆಂಡ್‌ ನ.9ರಂದು ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಲೀಗ್‌ ಪಂದ್ಯವನ್ನಾಡಲಿದೆ. ಈ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿ಼ಲೆಂಡ್‌ ಸೋತು, ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಗೆದ್ದರೆ, ಪಾಕ್‌ ತಂಡಕ್ಕೆ 10 ಪಾಯಿಂಟ್ಸ್‌ ಲಭಿಸಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಮತ್ತು ಸೌತ್‌ ಆಫ್ರಿಕಾ ತಂಡಗಳು ಅಫ್ಘಾನಿಸ್ತಾನವನ್ನ ಮಣಿಸಲಿದೆ ಎಂಬ ಲೆಕ್ಕಾಚಾರ ಹೊಂದಲಿದೆ.
ಒಂದೊಮ್ಮೆ ಅಫ್ಘಾನಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಅಥವಾ ಸೌತ್‌ ಆಫ್ರಿಕಾ ವಿರುದ್ಧ ಗೆದ್ದರೆ, ಅಫ್ಘಾನಿಸ್ತಾನ ಕೂಡ 10 ಅಂಕಗಳನ್ನ ಪಡೆಯಲಿದೆ. ಈ ಹಂತದಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಸೆಮೀಸ್‌ ಸ್ಥಾನ ನಿರ್ಧಾರವಾಗಲಿದೆ. ಒಂದು ವೇಳೆ ಅಫ್ಘಾನ್‌ ತಂಡ ಆಸ್ಟ್ರೇಲಿಯಾ ಮತ್ತು ಸೌತ್‌ ಆಫ್ರಿಕಾ ತಂಡಗಳನ್ನ ಮಣಿಸಿದ್ದೇ ಆದಲ್ಲಿ 12 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
Afghanistan

ಸಾಧ್ಯತೆ 2:
ಮತ್ತೊಂದೆಡೆ ಶ್ರೀಲಂಕಾ ವಿರುದ್ಧ ನ್ಯೂಜಿ಼ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಗೆದ್ದು, ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ಮತ್ತು ಸೌತ್‌ ಆಫ್ರಿಕಾ ವಿರುದ್ಧ ಸೋತರೆ ಆಗ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿ಼ಲೆಂಡ್‌ ತಂಡಗಳ ಸೆಮೀಸ್‌ ಸ್ಥಾನ ನಿರ್ಧಾರ ಆಗಲಿದೆ. ಸದ್ಯ ಪಾಕಿಸ್ತಾನ(+0.036) ಹಾಗೂ ನ್ಯೂಜಿ಼ಲೆಂಡ್‌(+0.398) ರನ್‌ ರೇಟ್‌ ಹೊಂದಿದ್ದು, ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನದ ಗೆಲುವಿನ ಅಂತರ ಈ ಹಂತದಲ್ಲಿ ನಿರ್ಣಾಯಕ ಪಾತ್ರವನ್ನವಹಿಸಲಿದೆ. ಮತ್ತೊಂದೆಡೆ ಅಫ್ಘಾನಿಸ್ತಾನ ತನ್ನ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ ಅವರು ಸಹ 10 ಪಾಯಿಂಟ್ಸ್‌ ಪಡೆಯಲಿದೆ. ಆದರೆ ಸದ್ಯಕ್ಕೆ ಅಫ್ಘಾನ್‌ ತಂಡ ನೆಗೆಟಿವ್‌ ರನ್‌ರೇಟ್‌ ಹೊಂದಿದ್ದು, ಸೆಮೀಸ್‌ ರೇಸ್‌ನಲ್ಲಿ 3ನೇ ಸ್ಥಾನದಲ್ಲಿ ಉಳಿಯುವಂತೆ ಮಾಡಿದೆ.

ಸಾಧ್ಯತೆ 3:
ಇನ್ನೊಂದು ಲೆಕ್ಕಾಚಾರದ ಪ್ರಕಾರ ನ್ಯೂಜಿ಼ಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿ, ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಗೆದ್ದರೆ ಆಗ ಬಾಬರ್‌ ಆಜ಼ಂ ಪಡೆ 10 ಅಂಕದೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನ್ಯೂಜಿ಼ಲೆಂಡ್‌ಗಿಂತ ಮೇಲೆ ಸಾಗಲಿದೆ. ಇದರೊಂದಿಗೆ ಅಫ್ಘಾನಿಸ್ತಾನ ಒಂದು ಪಂದ್ಯದಲ್ಲಿ ಗೆದ್ದು 10 ಪಾಯಿಂಟ್ಸ್‌ ಪಡೆದರೆ, ಆಗ ಮತ್ತೊಮ್ಮೆ ರನ್‌ರೇಟ್‌ ಆಧಾರದಲ್ಲಿ ಸೆಮೀಸ್‌ ಸ್ಥಾನ ನಿರ್ಧಾರವಾಗಲಿದೆ. ಒಂದೊಮ್ಮೆ ಪಾಕಿಸ್ತಾನ ಹಾಗೂ ನ್ಯೂಜಿ಼ಲೆಂಡ್‌ ತಂಡಗಳ ಮುಂದಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ರನ್‌ರೇಟ್‌ ಲೆಕ್ಕಾಚಾರದಲ್ಲಿ ಕಿವೀಸ್‌ ನೇರವಾಗಿ ಸೆಮೀಸ್‌ ಪ್ರವೇಶಿಸಲಿದೆ.

Related posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

June 24, 2026
fifa wolrd cup football 2026

FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

June 23, 2026

CWC 2023, Pakistan, New Zealand, World Cup, Semi-Finals

Tags: CWC 2023New ZealandPakistansemi finalsWorld Cup
ShareTweetSendShare
Join us on:

Related Posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

fifa wolrd cup football 2026

FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

by admin
June 23, 2026
0

FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್...

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

by admin
June 23, 2026
0

ಇದು ಬರೀ ಒಂದು ಫುಟ್‍ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ...

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

by admin
June 22, 2026
0

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬ..! ಎಂಥವರನ್ನು ನಿಬ್ಬೆರಾಗಿಸುವಂತಹ ಸ್ಫೋಟಕ ಬ್ಯಾಟಿಂಗ್..!ಮೈದಾನದ ಮೂಲೆಮೂಲೆಗಳಲ್ಲಿ ಪಸರಿಸುತ್ತದೆ ಕ್ರಿಕೆಟ್ ಆಟದ ಅಸಲಿ ರಂಗು..! ಹೊಡಿಬಡಿ ಆಟಕ್ಕೂ ಜೈ, ಕೆಣಕಿದ್ರೆ ಹೊಡೆದಾಟಕ್ಕೂ...

Alphonso Davies canad footballer

ಬಂದೂಕಿನ ಸದ್ದುಗಳ ನಡುವೆ ಹುಟ್ಟಿದ್ದ ಮಗು.., ಇಂದು ಫುಟ್‍ಬಾಲ್ ಜಗತ್ತಿನ ಧ್ರುವ ನಕ್ಷತ್ರ..!

by admin
June 22, 2026
0

ಇದು ಖಂಡಿತವಾಗಿಯೂ ಕಾಲ್ಪನಿಕ ಕಥೆಯಲ್ಲ. ನಮ್ಮ ಕಣ್ಣೆದುರೇ ನೋಡುತ್ತಿರುವ, ನಡೆದ, ನಡೆಯುತ್ತಿರುವ ವಾಸ್ತವ ಚಿತ್ರಣಗಳ ಅಕ್ಷರ ರೂಪವಷ್ಟೇ. ಬಂದೂಕಿನ ಸದ್ದುಗಳ ನಡುವೆ, ರಕ್ತದ ಮಡುವಿನಲ್ಲೇ ಹುಟ್ಟಿದ್ದ ಮಗು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram