ಹೆಚ್ ಡಿಕೆ ಬುದ್ಧಿವಂತರಿದ್ದಾರೆ, ವಿದ್ಯಾವಂತರಿದ್ದಾರೆ, ಅನುಭವಸ್ಥರಿದ್ದಾರೆ : ಡಿಕೆಶಿ D K Shivakumar
ಬೆಂಗಳೂರು :ಕಾಂಗ್ರೆಸ್ ಅಪಪ್ರಚಾರದಿಂದಲೇ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ಬುದ್ಧಿವಂತರಿದ್ದಾರೆ. ವಿದ್ಯಾವಂತರಿದ್ದಾರೆ, ಅನುಭವಸ್ಥರಿದ್ದಾರೆ. ಆ ಬಗ್ಗೆ ಅವರನ್ನೇ ಕೇಳಿ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಭಾಗಿಯಾಗಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿವಕುಮಾರ್, ಲಸಿಕಾ ಕಾರ್ಯಕ್ರಮವನ್ನು ನಾವು ಯಾವತ್ತೂ ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಸದಾ ಸರ್ಕಾರಕ್ಕೆ ಬೆಂಬಲಿಸಿದ್ದೇವೆ. ಲಸಿಕೆ ವಿಚಾರವಾಗಿ ಯಾವತ್ತೂ ವಿರೋಧಿಸಿಲ್ಲ. ಕಾಂಗ್ರೆಸಿಗರೂ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.
ನಾವು ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಆದರೆ, ನಮ್ಮ ಬೆಂಬಲವನ್ನು ಸರ್ಕಾರ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದರು.