2027 ರ ವೇಳೆಗೆ ಭಾರತದ ಡೈರಿ ಉದ್ಯಮ 13 ರಿಂದ 27 ಲಕ್ಷ ಕೋಟಿಗೆ ತಲುಪಲಿದೆ – ಮೀನೇಶ್ ಶಾ
ಹೈನುಗಾರಿಕೆ ಪ್ರಾಯಶಃ ಮನುಕುಲದ ನಾಗರಿಕತೆಯಷ್ಟೇ ಹಳೆಯದಾಗಿದೆ. ಜಾಗತಿಕವಾಗಿ ಹೈನುಗರಿಕೆಯ ಮೌಲ್ಯ ಆಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳನ್ನ ಒಟ್ಟುಗೂಡಿಸಿದ್ದಕ್ಕಿಂತಲೂ ಹೆಚ್ಚಾಗಿದೆ ಎಂದು IDF ವಿಶ್ವ ಡೈರಿ ಶೃಂಗಸಭೆ 2022 ರಲ್ಲಿ ತಜ್ಞರು ಹೇಳಿದ್ದಾರೆ. ‘
IFCN AG ಜರ್ಮನಿಯ CEO ಡಾ. ಟಾರ್ಸ್ಟನ್ ಪ್ರಕಾರ, ಡೈರಿ ಉದ್ಯಮದ ಗ್ರಾಹಕ ಮೌಲ್ಯವು 800 ಶತಕೋಟಿ ಡಾಲರ್ ಆಗಿದೆ, ಇದು Apple ಮತ್ತು Microsoft ಕಂಪನಿಗಳು ಒಟ್ಟು ಆದಾಯಕ್ಕಿಂತ ದೊಡ್ಡದಾಗಿದೆ” ಎಂದು ತಿಳಿಸಿದರು. ಇದೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಹೈನುಗಾರಿಕೆಯ ವಿಕಾಸ: ಜೀವನೋಪಾಯದ ದೃಷ್ಟಿಕೋನ” ಎಂಬ ವಿಷಯದೊಂದಿಗೆ ಮಾತನಾಡಿದ್ದರು.
2014 ರಿಂದ 19 ರವರೆಗೆ ಹಾಲು ರೈತರು ಒಟ್ಟು ಆದಾಯದ 70% ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮೀನೇಶ್ ಶಾ ಅವರ ಪ್ರಕಾರ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೈನುಗಾರಿಕೆಯು ಸಮಾನವಾಗಿ ಮುಖ್ಯವಾಗಿದೆ ಏಕೆಂದರೆ ಇದು ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಜೀವನವನ್ನ ಒದಗಿಸುತ್ತದೆ.
ಭಾರತದಲ್ಲಿ ಡೈರಿ ಉದ್ಯಮದ ಪ್ರಸ್ತುತ ಮೌಲ್ಯ ರೂ. 13 ಲಕ್ಷ ಕೋಟಿ ಯಾಗಿದ್ದು 2027 ರ ವೇಳೆಗೆ 30 ಲಕ್ಷ ಕೋಟಿಯನ್ನ ತಲುಪಲಿದೆ ಎಂದು ತಿಳಿಸಿದರು.