Darling Krishna
ಲವ್ ಮಾಕ್ಟೇಲ್ ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ಟೇಲ್ ಸಕ್ಸಸ್ ಬಳಿಕ ಪಾರ್ಟ್-2 ನಲ್ಲೂ ನಿರತರಾಗಿರುವ ಕೃಷ್ಣ ಅಭಿನಯದ ಜೊತೆಗೆ ನಿರ್ದೇಶನದಲ್ಲೂ ಬ್ಯುಸಿಯಾಗಿದ್ದಾರೆ.
ಸದ್ಯ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ Shrikrishna@gmail.com ಸಿನಿಮಾದಲ್ಲೂ ನಟಿಸುತ್ತಿರುವ ಕೃಷ್ಣ ಇದೀಗ ‘ಶುಗರ್ ಫ್ಯಾಕ್ಟರಿ’ ಎನ್ನುವ ಹೊಸ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟೈಟಲ್ ಅನ್ನ ಅನೌನ್ಸ್ ಮಾಡಿರುವ ಸಿನಿಮಾತಂಡ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧವಾಗಿದೆ.
ನಟಿ ಅಮೂಲ್ಯ ಅವರ ಸಹೋದರ ದೀಪಿಕ್ ಅರಸ್ ಶುಗರ್ ಫ್ಯಾಕರಿ ಚಿತ್ರಕ್ಕೆ ಅರಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ದೀಪಿಕ್ ಅರಸ್ ಈ ಮೊದಲು ಮನಸಾಲಜಿ ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದರು. ಶುಗರ್ ಫ್ಯಾಕ್ಟಟರಿ ಎರಡನೇ ಸಿನಿಮಾ.
ಇನ್ನೂ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಲವ್ ಮಾಕ್ಟೇಲ್-2 ಸಿನಿಮಾದಲ್ಲಿ ಬ್ಯುಸಿ ಇರುವ ಡಾರ್ಲಿಂಗ್ ಕೃಷ್ಣ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಡಿಸೆಂಬರ್ ಅಥವಾ ಮುಂದಿನ ವರ್ಷಾರಂಭದಲ್ಲಿ ಸಿನಿಮಾ ರಿಲೀಸ್ ಮಾಡುವ ನಿರೀಕ್ಷೆ ಇದೆ.
Darling Krishna
ಮಹಿಳೆಯರು ಮನೆಗೆಲಸ ಬಿಟ್ಟು ಹೊರಗೆ ಬರೋದೇ ತಪ್ಪು ಎಂಬಂತೆ ಮಾತನಾಡಿದ “ಶಕ್ತಿಮಾನ್”..!
ಬಾಲಿವುಡ್ ನ ಕಿಂಗ್ ಖಾನ್ ಗೆ ಕಾಟ ಕೊಟ್ಟಿದ್ದ ಆ ನಟಿ ಯಾರು..!
ರಾಜಕೀಯದಲ್ಲಿ ಸೋಲುಂಡಿದ್ದ ಊರ್ಮಿಳಾ ರಾಜಕೀಯ ಭವಿಷ್ಯಕ್ಕೆ ಹೊಸಬೆಳಕು..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel