ದಾವಣಗೆರೆ – ಪೊಲೀಸ್ ಇಲಾಖೆಯಲ್ಲಿ ಪಾಕ್ ಪ್ರೇಮಿ ಪೋಲಿಸ್
ದಾವಣಗೆರೆ, ಅಗಸ್ಟ್23: ಪೊಲೀಸ್ ಸಿಬ್ಬಂದಿ ಓರ್ವ ‘ಪವರ್ ಆಫ್ ಪಾಕಿಸ್ತಾನ್’ ಎಂಬ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಅದನ್ನು ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿರುವ ಘಟನೆ ದಾವಣಗೆರೆ ವರದಿಯಾಗಿದೆ.
ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಗಿ ಕಾರ್ಯ ನಿರ್ವಹಿಸುತ್ತಿರುವ ಸನಾವುಲ್ಲಾ ಎಂಬಾತ ದೇಶವಿರೋಧಿ ಪೋಸ್ಟ್ ಶೇರ್ ಮಾಡುವ ಮೂಲಕ ತನ್ನ ಪಾಕಿಸ್ತಾನದ ಪ್ರೇಮ ವ್ಯಕ್ತಪಡಿಸಿದ್ದಾನೆ ಎಂದು ಹೇಳಲಾಗಿದೆ. ಈತ 2008 ಬ್ಯಾಚ್ ಪೊಲೀಸ್ ಟೀಮ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಪಾಕಿಸ್ತಾನ ಪರವಾದ ಪವರ್ ಆಫ್ ಪಾಕಿಸ್ತಾನ ಎನ್ನುವ ಪೇಜ್ ಶೇರ್ ಮಾಡಿ ತನ್ನ ಪಾಕ್ ಪ್ರೇಮವನ್ನ ತೋರಿಸಿಕೊಟ್ಟಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್‌ಪಿ ಹನುಮಂತರಾಯ ಅವರು ತನಿಖೆಗೆ ಆದೇಶಿಸಿದ್ದಾರೆ.
2014 ರಲ್ಲೂ ಕೂಡ ಕಾನ್ಸ್ ಟೇಬಲ್ ಸನಾವುಲ್ಲಾ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪೆಂಡ್ ಆಗಿದ್ದ ಎಂದು ತಿಳಿದು ಬಂದಿದೆ.