‘ಶ್ರೀವಲ್ಲಿ’ಯ ಕನ್ನಡ ಹಾಡಿಗೆ ಅಲ್ಲು ಅಂತೆಯೇ ಹೆಜ್ಜೆ ಹಾಕಿದ ವಾರ್ನರ್..!!!

1 min read

‘ಶ್ರೀವಲ್ಲಿ’ಯ ಕನ್ನಡ ಹಾಡಿಗೆ ಅಲ್ಲು ಅಂತೆಯೇ ಹೆಜ್ಜೆ ಹಾಕಿದ ವಾರ್ನರ್..!!!

ಪುಷ್ಪ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗಿದೆ ಅನ್ನೋದು ಈಗಾಗಲೇ ಎಲ್ರಿಗೂ ಗೊತ್ತಾಗಿದೆ.. ಡಿಸೆಂಬರ್ 17 ಕ್ಕೆ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿ , ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಬಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಈಗ ಅಮೇಜಾನ್ ಪ್ರೈಮ್ ನಲ್ಲಿ ಅದ್ಭುತ ಪ್ರದರ್ಶನ ಕಾಣ್ತಿದೆ..pushpa - saakshatv

ಈ ನಡುವೆ ಈ ಸಿನಿಮಾವನ್ನ ಬಾಲಿವುಡ್, ಟಾಲಿವುಡ್ ನ ಸ್ಟಾರ್ ಗಳು ಮೆಚ್ಚಿಕೊಂಡಿದ್ರೆ ,, ಸಿನಿಮಾದ ಹಾಡುಗಳಿಗೆ ಎಷ್ಟು ಕ್ರೇಜ್ ಇದೆ ಅನ್ನೋ ವಿಚಾರವೂ ಎಲ್ರಿಗೂ ಗೊತ್ತಿದೆ.. ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಹೀ ಹಿಂದೆ ಪುಷ್ಪರಾಜ( ಸಿನಿಮಾದಲ್ಲಿ ಅಲ್ಲು ಪಾತ್ರ )ನ ಲುಕ್ ನಲ್ಲಿ ಫೋಟೋ ಕೊಟ್ಟಿದ್ದ ಫೊಟೋ ಶೇರ್ ಮಾಡಿ ಸಂಚಲನ ಸೃಷ್ಟಿ ಮಾಡಿದ್ದರು..

 

ಅಷ್ಟೇ ಅಲ್ಲ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಶ್ರೀವಲ್ಲಿ ಹಾಡಿಗೆ ಅಲ್ಲು ಸ್ಟೆಪ್ ನ ರಿಕ್ರಿಯೇಟ್ ಮಾಡಿದ್ದರು.. ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶಾನ್ ಶ್ರೀವಲ್ಲಿ ಹಾಡಿನಲ್ಲಿನ ಅಲ್ಲು ಸ್ಟೆಪ್ಸ್ ಮರುಸೃಷ್ಟಿಸಿದ್ದರು.. ಈ ವಿಡಿಯೋವನ್ನ ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿತ್ತು.. ಇವರ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ ಆಗಿ ನೆಟ್ಟಿಗರಂತೂ ನಾನಾ ರೀತಿಯ ಕಮೆಂಟ್ ಗಳನ್ನ ಮಾಡಿದ್ದರು..

ಇದೀಗ ಕ್ರಿಕೆಟಿಗನಿಂದಲೇ ಪುಷ್ಪ ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತಿದೆ..   ಆಸ್ಟ್ರೇಲಿಯಾದ ಕ್ರಿಕೆಟರ್ ಹಾಗೂ ಐಪಿಎಲ್ ನ ಹೈದ್ರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್.  ಇದೇ ಶ್ರೀವಲ್ಲಿ ಹಾಡಿಗೆ ಥೇಟ್ ಅಲ್ಲು ಅರ್ಜುನ್ ಹಾಗೆಯೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಅಂತು ಈಗ ಸಖತ್ ವೈರಲ್ ಆಗ್ತಿದ್ದು, ಸಂಚಲನ ಸೃಷ್ಟಿ ಮಾಡಿದೆ..

ಅಷ್ಟೇ ಅಲ್ಲ ಇಲ್ಲಿ ಗಮನಿಸಲೇಬೇಕಾದ ವಿಚಾರ ಅಂದ್ರೆ ಡ್ಯಾನ್ಸ್ ಮಾಡೋದಕ್ಕೆ ವಾರ್ನರ್ ಆಯ್ದುಕೊಂಡಿರುವ ಕನ್ನಡ ಅವತರಣಿಕೆಯ ಹಾಡನ್ನ.. ಇದು ಕನ್ನಡಾಭಿಮಾನಿಗಳ ಕ್ರೇಜ್ ಮತ್ತಷ್ಟು ಹೆಚ್ಚಿಸಿದೆ.. ಅಷ್ಟೇ ಅಲ್ಲ ವಿಡಿಯೋದ ಕೊನೆಯಲ್ಲಿ ತಗ್ಯದೇ ಲೇ ಎಂದು ಆಕ್ಟ್ ಕೂಡ ಮಾಡಿ ಸಖತ್ ಗಮನ ಸೆಳೆದಿದ್ದಾರೆ..

ಅಂದ್ಹಾಗೆ ಈ ವಿಡಿಯೋ ಈ ವರೆಗೂ 9 ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಪಡೆದಿದೆ. 25 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ..

ಪುಷ್ಪ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು , ರಶ್ಮಿಕಾ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾಗ ಭಾಗ 2 ಮುಂದಿನ ವರ್ಷಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ.. ಈ ಸಿನಿಮಾ ಈವರೆಗೂ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸುಮಾರು 400 ಕೋಟಿ ರೂ ಕಲೆಕ್ಷನ್ ಮಾಡಿದ್ದು ಹಿಂದಿ ಅವತರಣಿಕೆಯೊಂದರಿಂದಲೇ 85 – 88 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ..

 

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd