ವೃದ್ಧಾಶ್ರಮದಲ್ಲಿ ಅಗ್ನಿ ಅವಘಡ: ಇಬ್ಬರ ಸಾವು 13 ಮಂದಿ ರಕ್ಷಣೆ..
ದೆಹಲಿ ಗ್ರೇಟರ್ ಕೈಲಾಶ್ II ಬಳಿ ಇರುವ ವೃದ್ಧಾಶ್ರಮದಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಗ್ರೇಟರ್ ಕೈಲಾಶ್ II ರ ಇ ಬ್ಲಾಕ್ನಲ್ಲಿರುವ ಓಲ್ಡ್ ಏಜ್ ಹೋಮ್ ನಲ್ಲಿ ಬೆಂಕಿ ಅಪಘಾತ ಸಂಭಿವಿಸದೆ 13 ಮಂದಿಯನ್ನ ಸುರಕ್ಷಿತವಾಗಿ ಸ್ಥಳಾಂತರಿಸಿದ್ದೇವೆ, ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿ ನಿಂತ್ರಣಕ್ಕೆ ಬಂದಿದೆ ಎಂದು ದೆಹಲಿ ಅಗ್ನಿ ಶಾಮಕ ದಳ ತಿಳಿಸಿದೆ.
ಎನ್ಒಸಿ ಆಫ್ ಕೇರ್ ಹೋಮ್ ಪರವಾನಿಗೆಯನ್ನ ನಾವು ಪರಿಶೀಲನೆ ಮಾಡುತ್ತಿದ್ದೇವೆ ಮತ್ತು ಬೆಂಕಿಗೆ ಕಾರಣವನ್ನ ಪತ್ತೆ ಮಾಡುತ್ತಿದ್ದೇವೆ ಎಂದು ದೆಹಲಿ ದಕ್ಷಿಣ ಪೊಲೀಸ್ ಉಪ ಆಯುಕ್ತ ಚಂದನ್ ಚೌಧರಿ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥತಿ ಚಿಂತಾಜನಕವಾಗಿದ್ದು ಮ್ಯಾಕ್ಸ್ ಆಸ್ಪತ್ರಗೆ ಸ್ಥಳಾಂತರಿಸಲಾಗಿದೆ.
Delhi Fire: Fire accident in old age home: 2 dead, 13 rescued..