ಜಗತ್ತಿನಾದ್ಯಂತ ಭಯಹುಟ್ಟಿಸಿರುವ ಕೊರೋನಾ ವೈರಸ್ ಭಾರತಕ್ಕೂ ಪ್ರವೇಶಿಸಿದ್ದು, ಸೋಂಕು ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲು ಆದೇಶಿಸಲಾಗಿದೆ.
ಗಾಜಿಯಾಬಾದ್ ನಲ್ಲಿ ಹೊಸ ಕೊರೋನಾ ವೈರಸ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ,ಎಂಸಿಡಿ ಮತ್ತು ಎನ್ ಡಿಎಂಸಿ ಶಾಲೆಗಳಿಗೆ ಮಾರ್ಚು 31ರವರೆಗೆ ರಜೆ ನೀಡಲು ಆದೇಶ ಹೊರಡಿಸಲಾಗಿದೆ.
ಉಪಮುಖ್ಯಮಂತ್ರಿಯೂ ಆಗಿರುವ ಶ್ರೀ ಸಿಸೋಡಿಯಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ ನಮ್ಮ ಮಕ್ಕಳಲ್ಲಿ COVID-19 ಹರಡುವ ಸಾಧ್ಯತೆಯನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ, ದೆಹಲಿ ಸರ್ಕಾರವು ಎಲ್ಲಾ ಪ್ರಾಥಮಿಕ ಶಾಲೆಗಳನ್ನು (ಸರ್ಕಾರಿ / ಅನುದಾನಿತ / ಖಾಸಗಿ / ಎಂಸಿಡಿ / ಎನ್‌ಡಿಎಂಸಿ) 31/3/20 ರವರೆಗೆ ತಕ್ಷಣ ರಜೆ ನೀಡುವಂತೆ ನಿರ್ದೇಶಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಕೊರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾರತ-ಯುರೋಪಿಯನ್ ಯೂನಿಯನ್ (ಇಯು) ಶೃಂಗಸಭೆಗಾಗಿ ನಿಗದಿಯಾಗಿದ್ದ ಬ್ರುಸೆಲ್ಸ್ ಭೇಟಿಯನ್ನು ರದ್ದುಪಡಿಸಿದ್ದಾರೆ.








