ಮೈಸೂರು: ಲಾಕ್‌ಡೌನ್ ಪರಿಣಾಮ ರಾಜ್ಯದ ಲಕ್ಷಾಂತರ ಕರಕುಶಲ ಕರ್ಮಿಗಳು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡದ ಕಾರಣ ಕರಕುಶಲ ಕರ್ಮಿಗಳ ಸ್ಥಿತಿ ಬೀದಿಯಲ್ಲಿ ಭಿಕ್ಷೆ ಬೇಡುವಂತಾಗಿದೆ ಎಂದು ರಾಜ್ಯ ಕರಕುಶಲ ಕರ್ಮಿಗಳ ಸಂಘಟನೆಯ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಸುಮಾರು ೩ ಸಾವಿರ ಕುಶಲ ಕರ್ಮಿಗಳು ಕುಂದಣ ಕಲೆ ಮಾಡಿಕೊಂಡು ಬಂದಿದ್ದಾರೆ. ಈ ಕಲೆಯು ರಾಜ ಮಹಾರಾಜರುಗಳ ಕಾಲದ ಇತಿಹಾಸ ಹೊಂದಿದೆ. ದೇಶ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದೆ.
ಕುಶಲಕರ್ಮಿಗಳು ಈ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದ್ರೆ, ಲಾಕ್‌ಡೌನ್ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವರ್ಗಕ್ಕೆ ಸಹಾಯ ಧನ ಘೋಷಣೆ ಮಾಡಿಲ್ಲ ಎಂದು ಕುಮಾರ್ ಆರೋಪಿಸಿದ್ದಾರೆ.
ಕುಂದಾಳ ಕಲೆಯಲ್ಲಿ ಹಲವರು ರಾಷ್ಟç, ರಾಜ್ಯ ಹಾಗೂ ಇತರ ಪ್ರಶಸ್ತಿ ಪಡೆದವರು ಇದ್ದಾರೆ. ಸರ್ಕಾರ ಚಿನ್ನ, ಬೆಳ್ಳಿ ಪದಕ ಕೊಡುತ್ತದೆ, ಆದರೆ ಅದು ಚಿನ್ನದಲ್ಲ. ಸರ್ಕಾರ ಚಿನ್ನ, ಬೆಳ್ಳಿ ಪದಕ ನೀಡಿದ್ದರೇ ಈ ಸಮಯದಲ್ಲಿ ಅದನ್ನ ಕರಗಿಸಿ ಅಥವಾ ಮಾರಿಯಾದರೂ ಊಟ ಮಾಡಬಹುದಿತ್ತು ಎಂದು ಕರಕುಶಲ ಕರ್ಮಿ ವೆಂಕಟೇಶ್, ಕೃಷ್ಣಮೂರ್ತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕುಂದಾಣ