“ಡೆವಿಲ್ ಈಸ್ ಬ್ಯಾಕ್” ಸರ್ಜರಿ ಬಳಿಕ ಪ್ರಕಾಶ್ ರಾಜ್ ಹೊಸ ಪೋಸ್ಟ್..!
ಸ್ಯಾಂಡಲ್ ವುಡ್ , ಟಾಲಿವುಡ್ , ಕಾಲಿವುಡ್ , ಬಾಲಿವುಡ್ ಹೀಗೆ ಇನ್ನೂ ಹಲವಾರು ಭಾಷೆಗಳಲ್ಲಿ ಮಿಂಚು ಹರಿಸಿರುವ , ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಮ್ಮ ಕನ್ನಡಿಗ ಪ್ರಕಾಶ್ ರಾಜ್ ಅವರು ಇತ್ತೀಚೆಗಷ್ಟೇ ಶೂಟಿಂಗ್ ವೇಳೆ ಬಿದ್ದು ಗಾಯಗೊಂಡಿದ್ದರು.. ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದ್ದ ಕಾರಣ ಹೈದ್ರಾಬಾದ್ ನ ಆಸ್ಪತ್ರೆಗೆ ತೆರಳಿದ್ದರು.. ಇದೀಗ ಸರ್ಜರಿ ಬಳಿಕ ಗುಣಮುಖರಾಗಿರುವ ಪ್ರಕಾಶ್ ರಾಜ್ ಅವರು ಮೊದಲ ಪೋಸ್ಟ್ ಹಾಕುವ ಮೂಲಕ “ಡೆವಿಲ್ ಈಸ್ ಬ್ಯಾಕ್ “ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ..
ಈ ಮೂಲಕ ಆತಂಕದಲ್ಲಿದ್ದ ಅಭಿಮಾನಿಗಳು ನಿರಾಳರಾಗಿದ್ದು, ಪ್ರಕಾಶ್ ರಾಜ್ ಅವರಿಗೆ ಶುಭಹಾರೈಸುತ್ತಿದ್ದಾರೆ.. ಪ್ರಕಾಶ್ ರಾಜ್ ಚೆನ್ನೈನಲ್ಲಿ ( ಆಗಸ್ಟ್ 10) ತಮಿಳು ನಟ ಧನುಷ್ ನಟನೆಯ ‘D44’ ಚಿತ್ರೀಕರಣದಲ್ಲಿ ನಿರತರಾಗಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ತಕ್ಷಣ ಅವರನ್ನು ಅಲ್ಲೇ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೈದರಾಬಾದ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಗಾಗಿದ್ದರು.. ಸರ್ಜರಿ ಯಶಸ್ವಿಯಾದ ಬಳಿಕ ಪೋಸ್ಟ್ ಮಾಡಿದ್ದಾರೆ..
ಈ ಪೋಸ್ಟ್ ನಲ್ಲಿ ಪ್ರಕಾಶ್ ರಾಜ್ ಅವರು ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದು, ರಾಜ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.. ಅದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಒಂದು ಕೈಗೆ ಸರ್ಜರಿ ಆಗಿರುವುದು ಗೊತ್ತಾಗುತ್ತಿದೆ. ಅಲ್ಲದೇ “ಡೆವಿಲ್ ಈಸ್ ಬ್ಯಾಕ್. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ನನ್ನ ಆತ್ಮೀಯ ಸ್ನೇಹಿತ ಡಾ.ಗುರುವರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆಗೆ ಧನ್ಯವಾದಗಳು. ಸದ್ಯದಲ್ಲೇ ಕೆಲಸಕ್ಕೆ ಮರಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ತೆಲುಗು ಸಿನಿಮಾ ಕಲಾವಿದರ ಸಂಘದ (‘ಮಾ’) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರಾಜ್ ಸ್ಪರ್ಧೆ ಮಾಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಷನ್ ನಡೆಯಲಿದೆ. ಮಂಚು ವಿಷ್ಣು, ಜೀವಿತಾ ರಾಜಶೇಖರ್ ಹಾಗೂ ಹೇಮಾ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಗಳಾಗಿದ್ದಾರೆ. ಇನ್ನೂ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ಅರ್ಜುನ್ ನಟನೆಯ ಪುಷ್ಪ, ರಜನಿಕಾಂತ್ ಅಭಿನಯದ ಅಣ್ಣಾತ್ತೆ ಹೀಗೆ ಇನ್ನೂ ಸಾಲು ಸಾಲು ಬಿಗ್ ಸ್ಟಾರ್ ಗಳ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್ ಬಣ್ಣ ಹಚ್ಚಿದ್ದಾರೆ.








