ಮುಂದಿನ ತಿಂಗಳಿಂದ ರಾಮ್ ಜನ್ಮಭೂಮಿಯಲ್ಲಿ ಭಕ್ತರು ಆರತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಮಹಂತ್ ದಾಸ್ ಹೇಳಿದ್ದಾರೆ.
ರಾಮ್ ಲಲ್ಲಾ ವಿಗ್ರಹಗಳನ್ನು ಮಾರ್ಚ್ 25 ರಂದು ಈಗಿನ ತಾತ್ಕಾಲಿಕ ದೇವಾಲಯದಿಂದ 200 ಮೀಟರ್ ಸ್ಥಳಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಮುಂದಿನ ತಿಂಗಳು ರಾಮ್ ಜನ್ಮಭೂಮಿ ಆವರಣದಲ್ಲಿ ನಡೆಯುವ ರಾಮ್ ನವಮಿ ಸಂಭ್ರಮಾಚರಣೆಯಲ್ಲಿ ಮೊದಲ ಬಾರಿಗೆ ಭಕ್ತರಿಗೆ ‘ಆರತಿ’ಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತಿರುವುದಾಗಿ ಬಾಬರಿ ಮಸೀದಿಯನ್ನು ಉರುಳಿಸುವ ಮೊದಲು 1992 ರಿಂದ ರಾಮ ಜನ್ಮಭೂಮಿಯಲ್ಲಿ ಅರ್ಚಕರಾಗಿರುವ ಮಹಂತ್ ಸತೇಂದ್ರ ದಾಸ್ ಹೇಳಿದ್ದಾರೆ
ಪ್ರತಿದಿನ ಮುಖ್ಯ ಅರ್ಚಕ ಸತೇಂದ್ರ ದಾಸ್ ಮತ್ತು ಅವರ ನಾಲ್ವರು ಸಹಾಯಕರು ಪೂಜಾ ಕಾರ್ಯಗಳಿಂದ ಹೊರಗುಳಿದು ಭಕ್ತರೊಂದಿಗೆ ಪೂಜೆ ಮಾಡುತ್ತಾರೆ. ಈ ವರ್ಷ ದೇವರಿಗೆ ಹೊಸ ವೆಲ್ವೆಟ್ ಬಟ್ಟೆಗಳನ್ನು ತಯಾರಿಸಲಾಗುವುದು. ಅಲ್ಲದೆ, ಪ್ರತಿ ವರ್ಷ ನಾವು ಒಂದು ಕ್ವಿಂಟಾಲ್ ಪಂಜೇರಿ (ಉತ್ತರ ಭಾರತೀಯ ಸಿಹಿ) ಮತ್ತು 50 ಕೆಜಿ ಪಂಚಮೃತ್ ಪ್ರಸಾದ ರೂಪದಲ್ಲಿ ವಿತರಿಸುತ್ತೇವೆ. ಆದರೆ ಈ ವರ್ಷ ನಾವು ಮೂರು ಕ್ವಿಂಟಾಲ್ ಪಂಜೇರಿ ಮತ್ತು ಒಂದು ಕ್ವಿಂಟಾಲ್ ಪಂಚಮೃತ್ ಅನ್ನು ವಿತರಿಸಲಿದ್ದೇವೆ ಎಂದೂ ಮಹಂತ್ ದಾಸ್ ಹೇಳಿದ್ದಾರೆ.
ಹಿಂದೂಗಳ ಆರಾಧ್ಯದೈವ ಶ್ರೀ ರಾಮಚಂದ್ರ ಮತ್ತು ಅವನ ಮೂವರು ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನ ರ ವಿಗ್ರಹಗಳನ್ನು ಮಾರ್ಚ್ 25ರಂದು ಗುಂಡು ನಿರೋಧಕ ವ್ಯವಸ್ಥೆಯಡಿಯಲ್ಲಿ ಗರ್ಭಗುಡಿ (ಗರ್ಭ ಗ್ರಹ) ಯಿಂದ ಹೊಸ ತಾತ್ಕಾಲಿಕ ಸ್ಥಳದ ಗರ್ಭ ಗುಡಿಗೆ ಸ್ಥಳಾಂತರಿಸಲಾಗುವುದು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಾಗಲಿದ್ದು, ಅವರು ಸಹ ವಿಗ್ರಹಗಳಲ್ಲಿ ಒಂದನ್ನು ಹೊಸ ಗರ್ಭಗುಡಿ ಗೆ ಸಾಗಿಸುವ ಸಾಧ್ಯತೆಯಿದೆ.
ಅವರು ವಿಗ್ರಹವನ್ನು ಸಾಗಿಸಲು ಬಯಸಿದರೆ, ಆದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಸ್ವಸ್ತಿ ವಚನ್ ಮಂತ್ರವನ್ನು ಪಠಿಸುವಾಗ ವಿಗ್ರಹಗಳನ್ನು ಸ್ಥಳಾಂತರಿಸಲಾಗುವುದು ಎಂದು ಮಹಂತ್ ದಾಸ್ ಹೇಳಿದ್ದಾರೆ.
ಆದರೆ ಹಿಂದೂಗಳು ಆರಾಧಿಸುವ ಶ್ರೀರಾಮ ನ ಜನ್ಮದಿನಾಚರಣೆಯಂದು ಆಚರಿಸಲಾಗುವ ರಾಮ ನವಮಿ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ.
ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಏಪ್ರಿಲ್ 2 ರಂದು ರಾಮ್ ನವಮಿ ಸಂಭ್ರಮಾಚರಣೆಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯಗಳಿವೆ. ಆದರೆ ಸ್ಥಳೀಯ ಆಡಳಿತವು ಅದನ್ನು ಮುಂದುವರಿಸಲು ಉತ್ಸುಕವಾಗಿದೆ.
ರಾಮ್ ನವಮಿ ಸಂಪ್ರದಾಯದಂತೆ ಮತ್ತು ಅಗತ್ಯವಾದ ಕಾಳಜಿ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಆಚರಿಸಲಾಗುವುದು. ಆಡಳಿತವು ಜನರಿಗೆ ಸಮಯೋಚಿತ ಸಲಹೆಯನ್ನು ನೀಡುತ್ತದೆ ಮತ್ತು ಭೇಟಿ ನೀಡುವ ಭಕ್ತರ ಆರೋಗ್ಯದ ಬಗ್ಗೆ ಎಲ್ಲಾ ಅಗತ್ಯ ಕಾಳಜಿಯನ್ನು ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಶಕಗಳಿಂದ ನಾನಾ ಹಂತದ ನ್ಯಾಯಾಲಯಗಳ ವಿಚಾರಣೆಗೆ ಗುರಿಯಾಗಿದ್ದ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಭೂವಿವಾದದ ಡಿಸೆಂಬರ್ 9, ನವೆಂಬರ್ 2019 ಬಗೆಹರಿದಿತ್ತು. ಸುಪ್ರೀಂ ಕೋರ್ಟ್ ನ ಐವರು ಜಸ್ಟೀಸ್ ಗಳು ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಿಸಲು ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಆದೇಶಿಸಿ ತೀರ್ಪನ್ನು ನೀಡಿ ವಿವಾದಕ್ಕೆ ಕೊನೆ ಎಳೆದಿದ್ದರು.








