ಪಶ್ಚಿಮ ಬಂಗಾಳ ಚುನಾವಣೆ : ವ್ಹೀಲ್ ಚೇರ್ ನಲ್ಲೇ ದೀದಿ ರೋಡ್ ಶೋ..!

1 min read

ಪಶ್ಚಿಮ ಬಂಗಾಳ ಚುನಾವಣೆ : ವ್ಹೀಲ್ ಚೇರ್ ನಲ್ಲೇ ದೀದಿ ರೋಡ್ ಶೋ..!

ಕೋಲ್ಕತ್ತಾ : ನಂದಿಗ್ರಾಮ ವಿಧಾಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ವಾಪಸ್ ಆಗ್ತಿದ್ದ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅನ್ನ ಅಪರಿಚಿತರು ತಳ್ಳಿದ ಹಿನ್ನೆಲೆ ಗಾಯಗೊಂಡಿದ್ದ ದೀದಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಆದ್ರೆ ವ್ಹೀಲ್ ಚೇರ್ ನಲ್ಲಿ ಮತಪ್ರಚಾರದ ರೋಡ್ ಶೋ ನಲ್ಲಿ ಮಮತಾ ಬ್ಯಾನರ್ಜಿ ಭಾಗಿಯಾಗಿ ಮತಯಾಚನೆ ಮಾಡ್ತಾಯಿದ್ಧಾರೆ. 2021ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಧ್ಯಾಹ್ನ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

didi

ಹಲ್ಲೆಯಿಂದಾಗಿ ಮುಖ್ಯಮಂತ್ರಿಯವರ ಎಡಗಾಲು, ಬಲಭುಜ, ಕುತ್ತಿಗೆ, ಮೊಣಕೈಗಳಿಗೆ ಹಾಗೂ ಸೊಂಟಕ್ಕೆ ಪೆಟ್ಟುಬಿದ್ದಿದ್ದು, ಊತ ಕಾಣಿಸಿಕೊಂಡಿದೆ. ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು ಪ್ಲಾಸ್ಟರ್ ಹಾಕಲಾಗಿದೆ. ಈಗ ಅವರು ಚೇತರಿಸಿಕೊಂಡಿದ್ದು ಸ್ಥಿರವಾಗಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಈ ನಡುವೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಇಂದು ನಿಗದಿಪಡಿಸಿದ್ದ ಚುನಾವಣಾ ಪ್ರಣಾಳಿಕೆ ಬಿಡುಗಡೆಯನ್ನು ರದ್ದುಗೊಳಿಸಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ನಿಗದಿ ಮಾಡುವುದಾಗಿ ತಿಳಿಸಿದೆ.  ರ್ಚ್ 27 ರಿಂದ ಪಶ್ಚಿಮ ಬಂಗಾಳ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd