ಕ್ಯಾಂಡಿಡೇಟ್ ಅಂದ್ರೆ ಹೀಗಿರ್ಬೇಕು.. ಹಿಂಗ್ ಪ್ರಚಾರ ಮಾಡೋಕು ದಮ್ ಬೇಕು.!
ಸದ್ಯ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕಣ ರಂಗೇರಿದೆ. ನಾಮಪತ್ರ ಹಿಂಪಡೆಯುವ ದಿನಾಂಕ ಮುಗಿದಿರುವ ಹಿನ್ನೆಲೆ ಕದನ ಹುರಿಯಾಳುಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಈ ಮಧ್ಯೆ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಗಂಗಮ್ಮ ಹೆಚ್ ಅನ್ನೋರ ಚುನಾವಣಾ ಪ್ರಚಾರ ಇದೀಗ ಭಾರಿ ಸದ್ದು ಮಾಡುತ್ತಿದೆ. ಇವರ ಕರಪತ್ರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾಗಿ ವೈರಲ್ ಆಗುತ್ತಿದೆ.
ಗಂಗಮ್ಮ ಹೆಚ್ ಎಂಬುವವರು ತಮ್ಮ ಪಾಂಪ್ಲೆಟ್ ನಲ್ಲಿ ಗೆದ್ದರೆ ಮಾಡುವ ಕೆಲಸಗಳನ್ನು ಹಾಗೂ ಚುನಾವಣೆಯಲ್ಲಿ ಸೋತರೆ ಮಾಡುವ ಕೆಲಸಗಳನ್ನು ಪಟ್ಟಿ ಮಾಡಿ ಅವುಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆ ಕೊಡುವಂತೆಯೂ ಇದೆ.
ಸದ್ಯ ಗಂಗಮ್ಮ ಹೆಚ್ ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದಪ್ಪ ಕ್ಯಾಂಡಿಡೇಟ್ ಅಂದ್ರೆ.. ಹಿಂಗ್ ಪ್ರಚಾರ ಮಾಡೋಕು ದಮ್ ಬೇಕು ಎಂದು ಫೇಸ್ ಬುಕ್ ನಲ್ಲಿ ಫೋಟೊ ಹಂಚಿಕೊಳ್ಳುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel